ಸಿವೇಜ್ ಫಾರಂ ತ್ಯಾಜ್ಯ ವಿಲೇವಾರಿ ಶೀಘ್ರ ಪೂರ್ಣ:ಅಸಾದ್ ಉರ್ ರೆಹಮಾನ್ ಶರೀಫ್

Spread the love

ಮೈಸೂರು: ಈಗಾಗಲೇ ಸಿವೇಜ್ ಫಾರಂ ತ್ಯಾಜ್ಯ ವಿಲೇವಾರಿ ಕಾರ್ಯ ಪ್ರಾರಂಭವಾಗಿದ್ದ,ಶೀಘ್ರವೆ ವಿಲೇವಾರಿ ಪೂರ್ಣಗೊಳ್ಳಲಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್ ತಿಳಿಸಿದರು.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅಸಾದ್ ಉರ್ ರೆಹಮಾನ್ ಶರೀಫ್ ಮಾತನಾಡಿ, ಕಳೆದ 20, 30 ವರ್ಷಗಳಿಂದ ಈ ಸಮಸ್ಯೆ ಇತ್ತು, ನಾವು ಪಾಲಿಕೆ ಆಯುಕ್ತರಾದ ಬಳಿಕ ತ್ಯಾಜ್ಯ ವಿಲೇವಾರಿಗೆ ಅನುಮೋದನೆ ಸಿಕ್ಕಿತ್ತು. ಚುನಾವಣೆ ಇದ್ದ ಕಾರಣ ತ್ಯಾಜ್ಯ ವಿಲೇವಾರಿ ಆಗಿರಲಿಲ್ಲ. ಚುನಾವಣೆ ಬಳಿಕ ಈಗ ತ್ಯಾಜ್ಯ ವಿಲೇವಾರಿ ಆಗುತ್ತಿದೆ. ತ್ಯಾಜ್ಯ ವಿಲೇವಾರಿ ಕಾರ್ಯವನ್ನ ಸೂರತ್ ಮೂಲದ ಡಿ ಹೆಚ್ ಪಟೇಲ್ ಎಂಬ ಕಂಪನಿ ಮಾಡುತ್ತಿದೆ ಎಂದು ತಿಳಿಸಿದರು.

ವಲಯ ಕಚೇರಿ ಹಾಗೂ ನೀರು ಸರಬರಾಜು ಇಲಾಖೆಯಲ್ಲಿ ಪ್ರತ್ಯೇಕ ಸಾಫ್ಟ್ ವೇರ್ ಬಳಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಆಯುಕ್ತರು, ಪ್ರತ್ಯೇಕ ಸಾಫ್ಟ್ ವೇರ್ ಬಳಕೆಯಿಂದ ಹಗರಣಗಳು ನಡೆಯುತ್ತಿಲ್ಲ. ಬದಲಾಗಿ ಹಗರಣಗಳು ನಡೆದಿರೋದು ಗೊತ್ತಾಗಿದೆ. ಪ್ರತ್ಯೇಕ ಸಾಫ್ಟ್ ವೇರ್ ನಲ್ಲಿ ಎಲ್ಲವು ತಿಳಿಯುತ್ತಿದೆ. ಕಂದಾಯ ಪಾವತಿ ಅಪ್ ಡೇಟ್ ಗೊತ್ತಾಗುತ್ತಿದೆ. ಹಿಂದೆ ನಮಗೆ ಇದರ ಬಗ್ಗೆ ಮಾಹಿತಿ ತಿಳಿಯುತ್ತಿರಲಿಲ್ಲ. ಈಗ 50 ಸಾವಿರ, 1 ಲಕ್ಷ ಮೇಲೆ ಕಂದಾಯ ಬಾಕಿ ಕಟ್ಟಬೇಕಿರುವ ಬಗ್ಗೆ ಮಾಹಿತಿ ಸಿಗುತ್ತಿದೆ. ನಾವು ಪ್ರತಿ ಸಭೆಯಲ್ಲೂ ಅದನ್ನ ರಿವ್ಯೂ ಮಾಡುತ್ತೇವೆ ಎಂದು ಹೇಳಿದರು.

ಈ ಹಿಂದೆ ಪಾಲಿಕೆಗೆ ಕಡಿಮೆ ಕಂದಾಯ ಪಾವತಿ ಆಗುತ್ತಿತ್ತು. ಈಗ 150,180 ಕೋಟಿ ವರೆಗೆ ಕಂದಾಯ ಪಾವತಿ ಆಗುತ್ತಿದೆ ಎಂದು ತಿಳಿಸಿದರು.

ಫುಟ್ ಪಾತ್ ಒತ್ತುವರಿ ಆಗಿದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ಸಾರ್ವಜನಿಕರ ಓಡಾಟಕ್ಕೆ ಫುಟ್ ಪಾತ್ ಇರೋದು. ಫುಟ್ ಪಾತ್ ಒತ್ತುವರಿ ತೆರವು ಮಾಡುತ್ತಿದ್ದೇವೆ. ಕೆಲ ಸಣ್ಣಪುಟ್ಟ ವ್ಯಾಪಾರಸ್ಥರು ಕೂಡ ಫುಟ್ ಪಾತ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ಕೂಡ ಪಾಲಿಕೆಗೆ ಕಂದಾಯ ನೀಡುತ್ತಾರೆ. ಅವರಿಂದಲೂ ನಮಗೆ ರೆವಿನ್ಯೂ ಬರುತ್ತಿದೆ. ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗದ ರೀತಿ ಕ್ರಮ ವಹಿಸುತ್ತೇವೆ ಎಂದು ಅಸಾದ್ ಉರ್ ರೆಹಮಾನ್ ಶರೀಫ್ ತಿಳಿಸಿದರು.