ಮೈಸೂರು: ಶ್ರೀ ದುರ್ಗಾಪೌಂಡೇಶನ್ 6ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಮೈಸೂರು ಸೇವಾ ರತ್ನ ಪ್ರಶಸ್ತಿ 2025 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾಧಕರಾದ ರಮೇಶ್ ರಾಮಪ್ಪ, ಕಾವ್ಯ, ಉಮೇಶ್ ವನಸಿರಿ, ಲಕ್ಷ್ಮಿ ನಾರಾಯಣ ಯಾದವ್, ಬೀರೇಶ್ ಅನಗೂಡು, ನಟರಾಜ್, ಬಸವರಾಜ್ ಕೆ, ಮಾಲಿನಿ ಮಲ್ಲೇಶ್, ಕೆ ಸುಶೀಲ ರಾವ್, ಶರದ, ಸಂಧ್ಯಾ ರಾಣಿ, ಸೌಮ್ಯ, ನಾಗೇಂದ್ರ ಕುಮಾರ್ ಅವರಿಗೆ ಮೈಸೂರು ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅವರು ಮಾತನಾಡಿ,
ಪ್ರತಿಯೊಬ್ಬರು ಸಮಾಜ ಸೇವೆಯಲ್ಲಿ ತೊಡಗಿಕೊಸಿಕೊಂಡು ಜೀವನದ ಸಾರ್ಥಕತೆ ಕಂಡುಕೊಳ್ಳಬೇಕು, ಸಮಾಜ ಸೇವೆಗಳಲ್ಲಿ ತನು, ಮನ ಸೇವೆಗಳು ಶ್ರೇಷ್ಠತೆ ಪಡೆದುಕೊಂಡಿವೆ ಎಂದು ಹೇಳಿದರು.
ಪ್ರತಿಯೊಬ್ಬರು ಧನವಿದ್ದರೇ ಮಾತ್ರ ಸೇವೆ ಮಾಡಬಹುದು ಎಂಬ ಮನೋಭಾವದಿಂದ ಹೊರಬಂದು, ತನು, ಮನ ಸೇವೆ ಸಲ್ಲಿಸುವ ಮೂಲಕ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಬಹುದು. ಸಮಾಜದಲ್ಲಿ ಒಳ್ಳೆಯ ಕಾರ್ಯ ಮಾಡುವ ಸಂದರ್ಭದಲ್ಲಿ ವ್ಯಕ್ತಿಯೇ ಇರಬೇಕು ಅಂತಿಲ್ಲ. ಅವರ ವ್ಯಕ್ತಿತ್ವ ಇದ್ದರೆ ಸಾಕು. ಇದಕ್ಕೆ ಶ್ರೀ ದುರ್ಗಾ ಪೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ಅವರೇ ಸಾಕ್ಷಿಯಾಗಿದ್ದಾರೆ ಎಂದು ತಿಳಿಸಿದರು
ಈ ಕಾರ್ಯಕ್ರಮ ದಲ್ಲಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ,ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಮೀಳಾ ಭರತ್, ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್, ಜಿ ರಾಘವೇಂದ್ರ, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಮುತ್ತಣ್ಣ, ಪತ್ರಕರ್ತರಾದ ರಾಘವೇಂದ್ರ, ಪವನ್ ಸಿದ್ದರಾಮು, ಅಜಯ್ ಶಾಸ್ತ್ರಿ, ಮಹಾನ್ ಶ್ರೇಯಸ್,
ರೂಪ ಗೌಡ, ದೀಪ ಮತ್ತಿತರರು ಪಾಲ್ಗೊಂಡಿದ್ದರು.