ಸರಸ್ವತಿಪುರಂ ಪೊಲೀಸರಿಂದ ಇಬ್ಬರು ಬಂಧನ,18,09,200 ರೂ ಬೆಲೆಯ ಚಿನ್ನಾಭರಣ ವಶ

Spread the love

ಮೈಸೂರು: ಮೈಸೂರಿನ ಸರಸ್ವತಿಪುರಂ ಠಾಣೆ ಪೊಲೀಸರು ಇಬ್ಬರು ಮನೆಗಳ್ಳರನ್ನು ಬಂಧಿಸಿ,20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಡಿ.9 ಒಬ್ಬ ಆರೋಪಿಯನ್ನು ಹಾಗೂ ಡಿ.23 ರಂದು ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದು ಕಳವು ಪ್ರಕರಣ ಗೊತ್ತಾಗಿದೆ.

ಆರೋಪಿಗಳಿಂದ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯ ಕನ್ನಕಳವು ಪ್ರಕರಣ ಮತ್ತು ಚಿಂತಾಮಣಿ ಟೌನ್ ಪೊಲೀಸ್ ಠಾಣೆಯ ವಾಹನ ಕಳವು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಒಟ್ಟು 18,9200 ರೂ ಮೌಲ್ಯದ 240 ಗ್ರಾಂ ಚಿನ್ನಾಭರಣ ಮತ್ತು 1ಕೆ.ಜಿ 146 ಗ್ರಾಂ ಬೆಳ್ಳಿ ಪದಾರ್ಥಗಳು ಹಾಗೂ ಮಾರುತಿ-800 ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಪತ್ತೆ ಕಾರ್ಯದಲ್ಲಿ ಮೈಸೂರು ನಗರದ ಡಿಸಿಪಿ ಅವರ ಮಾರ್ಗದರ್ಶನದಲ್ಲಿ, ವಿಜಯನಗರ ವಿಭಾಗದ ಎಸಿಪಿ ಗಜೇಂದ್ರಪ್ರಸಾದ್‌ ಅವರ ನೇತೃತ್ವದಲ್ಲಿ ಸರಸ್ವತಿಪುರಂ ಪೊಲೀಸ್ ಠಾಣೆಯ ಇನ್ಸ್‌ ಪೆಕ್ಟರ್ ಪುರುಷೋತ್ತಮ್ ಜಿ.,ಪಿಎಸ್‌ಐ ಗಳಾದ ಮಹೇಂದ್ರ ಟಿ ಎಸ್. ಮತ್ತು ಲತಾ ಎಸ್ ಎಸ್ ಹಾಗೂ ಎಎಸ್‌ಐ ನಾಗರಾಜು, ಶೇಷಾದ್ರಿ, ಬಸವರಾಜೇಅರಸ್, ಮೋಹನ್‌ಕುಮಾರ್, ಕುಮಾರ್, ಸುದೀಪ್‌ಕುಮಾರ್, ರಕ್ಷಿತ್‌ಕುಮಾರ್, ಚಂದ್ರಶೇಖ‌ರ್ ಹಾಗೂ ತಾಂತ್ರಿಕ ವಿಭಾಗದ ಕುಮಾರ್ ಅವರು ಪಾಲ್ಗೊಂಡಿದ್ದರು.