ಆರ್ ಟಿ ಒ ಕಚೇರಿಯಲ್ಲಿ ಕೆಲಸಗಳು ವಿಳಂಬ:ಅಧಿಕಾರಿಗೆ ಮನವಿ

Spread the love

ಮೈಸೂರು: ಮೈಸೂರು ಸಿಟಿ (ವೆಸ್ಟ) ಯೂಸ್ಡ್ ಕಾರ್ ಡೀಲರ್ಸ್ ಅಸೋಸಿಯೇಷನ್ ವತಿಯಿಂದ ಆರ್ ಟಿ ಒ ಕಚೇರಿಯಲ್ಲಿ ಕೆಲಸಗಳು ವಿಳಂಬವಾಗುತ್ತಿರುವುದರ ಬಗ್ಗೆ ಗಮನ ಸೆಳೆಯಲಾಯಿತು.

ಆರ್ ಟಿ ಒ ಕಚೇರಿಯಲ್ಲಿ ಕೆಲಸಗಳು ವಿಳಂಬವಾದಂತೆ ನೋಡಿಕೊಳ್ಳಬೇಕು,
ಕೆಲಸಗಳನ್ನು ಬೇಗ ಮಾಡಿಕೊಡಬೇಕೆಂದು ಆರ್ ಟಿ ಒ ಅಧಿಕಾರಿ ದೇವಿಕ ಅವರಿಗೆ‌
ಮೈಸೂರು ಸಿಟಿ (ವೆಸ್ಟ) ಯೂಸ್ಡ್ ಕಾರ್ ಡೀಲರ್ಸ್ ಅಸೋಸಿಯೇಷನ್
ಅಧ್ಯಕ್ಷ‌ ಬಿ.ಎನ್ ಪ್ರಧೀಪ್ ಗೌಡ ನೇತೃತ್ವದಲ್ಲಿ‌ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸುರೇಶ್,ಗೌರವ ಅಧ್ಯಕ್ಷ ಬಿ.ಟಿ. ರಾಜುಗೌಡ,ಮುರುಗೆಶ್,ವೇಣು,
ಕೃಷ್ಣ ,ಕಣ್ಣಪ್ಪ, ಶ್ರೀನಿವಾಸ ಮತ್ತು ಸದಸ್ಯರು ಹಾಜರಿದ್ದರು.