ಮೈಸೂರು: ಮೈಸೂರು ರಾಣಿ ಅಂದ್ರೆ ಅದೇನೊ ಎಲ್ಲರಿಗೂ ಬಹಳ ಪ್ರೀತಿ. ರೇಸ್ ಗೆ ನಿಂತರೆ ಅದನ್ನಾ ಮೀರಿಸೋರೆ ಇರಲಿಲ್ಲ.
ಮೈಸೂರಷ್ಟೇ ಅಲ್ಲ ಮಂಡ್ಯ, ತುಮಕೂರು, ಬೆಂಗಳೂರು, ಚಿಕ್ಕಮಗಳೂರು ಪಂದ್ಯದಲ್ಲೂ ಸೈ ಎನಿಸಿಕೊಂಡಿದ್ದ ಹಂಚ್ಯಾ ಗ್ರಾಮದ ಯುವಕರ ನೆಚ್ಚಿನ ಮೈಸೂರು ರಾಣಿ ಇನ್ನಿಲ್ಲ.
ಹೌದು ಮೈಸೂರು ತಾಲ್ಲೂಕಿನ ಹಂಚ್ಯಾಗ್ರಾಮದ ಶ್ರೀಧರ್ ಗೌಡ ಅವರು ಸಾಕಿದ್ದ ರೇಸ್ ಹಸು ತಡರಾತ್ರಿ ಆಕಸ್ಮಿಕವಾಗಿ ಸಾವನಪ್ಪಿದೆ.
ಜೋಡೆತ್ತಿನ ಗಾಡಿ ಓಟದಲ್ಲಿ ಇದುವರೆಗೆ ಬರೋಬ್ಬರಿ 70 ಕ್ಕೂ ಹೆಚ್ಚು ರೇಸ್ ಗಳಲ್ಲಿ ಭಾಗವಹಿಸಿದ್ದ ಮೈಸೂರು ರಾಣಿ ಖ್ಯಾತಿಯ ಹಸು ಮರೆಯಾಗಿಬಿಟ್ಟಿದೆ.
ಮೈಸೂರಿನ ರೇಸ್ ಹುಡುಗರ ಮನಸ್ಸು ಗೆದ್ದ ರಾಣಿಯಾಗಿತ್ತು. ಜೋಡೆತ್ತಿನ ಗಾಡಿ ಸ್ಪರ್ಧೆ ಎಲ್ಲೇ ನಡೆದಿದ್ದರೂ ಅಲ್ಲಿ ಭಾಗವಹಿಸುತ್ತಿದ್ದ ರಾಣಿ ನಿಧನಕ್ಕೆ ಇಡೀ ಗ್ರಾಮದ ಜನತೆ ದುಃಖ ವ್ಯಕ್ತಪಡಿಸಿದೆ.
ಹಳ್ಳಿಕಾರ್ ತಳಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವಪಡೆ ಅದನ್ನು ಚಿಕ್ಕ ಕರುವಿನಿಂದಲೂ ಸಾಕಿ, ತರಬೇತಿ ನೀಡಿತ್ತು. ಇದರ ಫಲವಾಗಿ ರಾಣಿ 70 ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸತ್ತು,ಅಷ್ಟೇ ಅಲ್ಲಾ ಎಲ್ಲ ಸ್ಪರ್ಧೆಗಳೆಲ್ಲೂ ಪ್ರಥಮ ಅಥವಾ ದ್ವೀತಿಯ ಸ್ಥಾನ ಪಡೆದಿತ್ತು.
ಕಿರಿಯರು, ಹಿರಿಯರ ಪ್ರೀತಿಯ ರಾಣಿ ಇನ್ನಿಲ್ಲ.ಹಂಚ್ಯಾ ಗ್ರಾಮ ಮತ್ತು ವಿವಿಧ ಗ್ರಾಮದ ಯುವಕರು ಸಂತಾಪ ವ್ಯಕ್ತಪಡಿಸಿದ್ದಾರೆ.