ರಾಮಸ್ವಾಮಿ ವೃತ್ತದಲ್ಲಿ ಅಪಾಯಕ್ಕೆಡೆ ಮಾಡಿದೆ ಜಾಹೀರಾತು ಕಮಾನು

ಮೈಸೂರು: ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಅಳವಡಿಸಿರುವ ವಾಣಿಜ್ಯ ಜಾಹೀರಾತು ಕಮಾನು‌ ಯಾವಾಗ ಪಾದಚಾರಿಗಳು ಮತ್ತು ವಾಹನ ಸವಾರರ ಜೀವಕ್ಕೆ ಅಪಾಯ ತರಲಿದೆಯೊ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕಮಾನು ಮೈಸೂರು ದಸರಾ ದೀಪಾಲಂಕಾರದ ಅಂಗವಾಗಿ ಅಳವಡಿಸಲಾಗಿತ್ತು,ಈವರೆಗೆ ತೆರವುಗೊಳಿಸಿಲ್ಲ, ಈಗಾಗಲೇ ಹಾಳಾಗಿದ್ದು ಕಳಚಿ ಬೀಳುವಂತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಯಾವಾಗ ಇದು ಯಾರ ತಲೆಯ ಮೇಲೋ ವಾಹನದ ಮೇಲೋ ಬಿದ್ದು ಅಪಾಯ ಸೃಷ್ಟಿಸುತ್ತದೋ ಅನ್ನೋ ಆತಂಕವಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಸಂಬಂಧಿಸಿದ ಇಲಾಖೆ ಮತ್ತು ಮೈಸೂರು ಮಹಾನಗರ ಪಾಲಿಕೆ ಈ ಬಗ್ಗೆ ಯಾವ ಕ್ರಮವೂ ಕೈಗೊಳ್ಳದಿರುವುದು ಎಷ್ಟು ಸರಿ?

ಸ್ಥಳಕ್ಕೆ ಭೇಟಿ ನೀಡಿದ ಹೋರಾಟಗಾರರು ಮತ್ತು ನಾಗರಿಕರು ಕಮಾನಿನ ಬಗ್ಗೆ ನಿರ್ಲಕ್ಷ್ಯವೇಕೆ ಯಾರಿಗಾದರೂ ಗಾಯವಾದರೆ, ಪ್ರಾಣಾಪಾಯವಾದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ಈ ಕಮಾನನ್ನು ತಕ್ಷಣ ತೆರವುಗೊಳಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ ಮೈಸೂರು
ರಕ್ಷಣಾ ವೇದಿಕೆ ಮತ್ತು ಕರ್ನಾಟಕ ಹಿತರಕ್ಷಣಾ ವೇದಿಕೆಯ ನಾಯಕರು ತೆರವುಗೊಳಿಸದಿದ್ದರೆ ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ.