ಮೈಸೂರು: ಬಿಸಿಲ ಬೇಗೆಯಲ್ಲಿ ಬಸವಳಿದಿದ್ದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾತ್ರಿ ವರುಣಾರ್ಭಟದಿಂದ ಹಿತವಾದ ವಾತಾವರಣ ಉಂಟಾಯಿತು.

ಸುಮಾರು 8.25 ಕ್ಕೆ ಪ್ರಾರಂಭವಾದ ಮಳೆ 9 ಗಂಟೆವರೆಗೆ ಬಹಳ ರಭಸವಾಗಿ ಸುರಿಯಿತು.ನಂತರ 9.30 ರವರೆಗೂ ಸಣ್ಣ ಮಳೆ ಸುತಿಯುತ್ತಲೇ ಇತ್ತು.

ಭಾರೀ ಗುಡುಗು,ಮಿಂಚು,ಸಿಡಿಲುಗಳ ಆರ್ಭಟ ಹೆಚ್ಚಾಗಿತ್ತು. ರಾತ್ರಿಯಾದುದರಿಂದ ಶಾಲಾ,ಕಾಲೇಜು,ಕಚೇರಿ ಹೀಗೆ ಯಾರಿಗೂ ತೊಂದರೆಯಾಗಲಿಲ್ಲ,ಆದರೆ ಬೀದಿಬದಿ ವ್ಯಾಪಾರಿಗಳಿಗೆ ತುಂಬಾ ತೊಂದರೆಯಾಯಿತು.

ಒಟ್ಟಾರೆ ಮೈಸೂರಿನಲ್ಲಿ ವರುಣನ ಕೃಪೆಯಿಂದ ಇಳೆ ತಂಪಾಯಿತು.ಅಹ್ಲಾದಕರ ವಾತಾವರಣ ಸೃಷ್ಟಿಯಾಯಿತು.