ತಿರುಪತಿ ತಿರುಮಲ: ತಿರುಮಲದ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ಮೈಸೂರು ರಾಜಮನೆತನದವರು ಬೃಹತ್ ಬೆಳ್ಳಿ ದೀಪಗಳನ್ನು ಕೊಡುಗೆಯಾಗಿ ನೀಡಿದ್ದಾರೆ
ತಿಮ್ಮಪ್ಪನಿಗೆ 100 ಕೆಜಿ ಬೆಳ್ಳಿ ದೀಪ ನೀಡಿ 3 ಶತಮಾನಗಳ ಸಂಪ್ರದಾಯಕ್ಕೆಮೈಸೂರು ರಾಜಮಾತೆ ಪ್ರಮೋದಾದೇವಿ ಒಡೆಯರ್
ಮರುಚಾಲನೆ ನೀಡಿದರು.

ಮೈಸೂರು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಹಾಗೂ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ್ ಒಡೆಯರ್ ತಿರುಪತಿ ದೇವಸ್ಥಾನದ ದರ್ಶನ ಪಡೆದು ನಂತರ ದೀಪಗಳನ್ನು ದೇವಸ್ಥಾನಕ್ಕೆ ಅರ್ಪಿಸಿದರು.
ಮೈಸೂರು ಅರಮನೆಯಿಂದ 3 ಶತಮಾನಗಳ ನಂತರ ತಿರುಪತಿ ದೇವಸ್ಥಾನಕ್ಕೆ ಅಪಾರ ಪ್ರಮಾಣದ ಕಾಣಿಕೆಗಳು ಬಂದಿರುವುದು ವಿಶೇಷ.
ಮೈಸೂರಿನ ರಾಜಮಾತೆ ಪ್ರಮೋದಾದೇವಿ ತಿರುಪತಿಯ ರಂಗನಾಯಕಕುಲ ಮಂಟಪದಲ್ಲಿ ಮೈಸೂರು ರಾಜ್ಯದ ದೇಣಿಗೆ ನೀಡಿದರು.
ಆಳೆತ್ತರದ ಬೆಳ್ಳಿ ದೀಪಗಳು ಇನ್ನುಮುಂದೆ ತಿರುಮಲ ದೇವಾಲಯದಲ್ಲಿ ಬೆಳಗಲಿವೆ. ಭಕ್ತಿ ಮತ್ತು ರಾಜ ಪರಂಪರೆಯ ಸಂಕೇತವಾಗಿ ಮೈಸೂರು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ತಿರುಮಲ ದೇವಸ್ಥಾನದಲ್ಲಿ ವೆಂಕಟೇಶ್ವರನಿಗೆ ಎರಡು ದೊಡ್ಡ ಬೆಳ್ಳಿ ದೀಪಗಳನ್ನು ದಾನ ಮಾಡಿದರು.
ರಂಗನಾಯಕಕುಲ ಮಂಟಪದಲ್ಲಿ ನಡೆದ ಅಧಿಕೃತ ಹಸ್ತಾಂತರ ಸಮಾರಂಭದಲ್ಲಿ ದೇವಾಲಯ ಆಡಳಿತದ ಪರವಾಗಿ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರು ಈ ಕಾಣಿಕೆಯನ್ನು ಸ್ವೀಕರಿಸಿದರು.
ಸರಿಸುಮಾರು 100 ಕೆಜಿ ತೂಕವಿರುವ ಈ ಬೆಳ್ಳಿ ದೀಪಗಳನ್ನು ಶಾಶ್ವತ ದೀಪಗಳಾಗಿ ಬಳಸಲಾಗುತ್ತದೆ. ಹಗಲು-ರಾತ್ರಿ ದೇವಾಲಯದ ಗರ್ಭಗುಡಿಯಲ್ಲಿ ಬೆಳಗುತ್ತಿರುವ ಅಖಂಡ ದೀಪಗಳನ್ನು ದೈವಿಕತೆಯ ಶಾಶ್ವತ ಉಪಸ್ಥಿತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮೈಸೂರು ರಾಜಮಾತೆಯ ಈ ಕಾಣಿಕೆಯು ದೇವಾಲಯದಲ್ಲಿ 300 ವರ್ಷಗಳಷ್ಟು ಹಳೆಯದಾದ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಿದೆ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಪ್ರಮೋದಾ ದೇವಿ ಒಡೆಯರ್ ಕಲೆ, ಸಂಸ್ಕೃತಿ ಮತ್ತು ಧಾರ್ಮಿಕ ಸಂಸ್ಥೆಗಳ ಪೋಷಕಿಯಾಗಿದ್ದಾರೆ. ಪ್ರಮೋದಾದೇವಿ ಒಡೆಯರ್ ಮೈಸೂರು ರಾಜವಂಶವು ಸ್ಥಾಪಿಸಿದ ಸಂಪ್ರದಾಯಗಳನ್ನು ಸಂರಕ್ಷಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ಈ ಅಖಂಡ ದೀಪಗಳು ಕೇವಲ ಬೆಳ್ಳಿಯಿಂದ ಮಾಡಿದ ದೀಪಗಳಲ್ಲ, ಅವು ನಮ್ಮ ಪರಂಪರೆ ಮತ್ತು ಭಕ್ತಿಯ ಪ್ರಮುಖ ಭಾಗವಾಗಿದೆ ಎಂದು ದೇವಾಲಯದ ಹಿರಿಯ ಅರ್ಚಕರು ತಿಳಿಸಿದ್ದಾರೆ.