ಮೈಸೂರು ಕಮೀಷನರ್ ಕಚೇರಿ ಆವರಣದಲ್ಲಿ ರೀಲ್ಸ್: ಎಷ್ಟು ಸರಿ- ತೇಜಸ್ವಿ ಪ್ರಶ್ನೆ

Spread the love

ಮೈಸೂರು: ಮೈಸೂರು ಪೊಲೀಸ್ ಕಮೀಷನರ್ ಕಚೇರಿ ಆವರಣದಲ್ಲಿ ಯುವ ರಾಜ್ ಸಿಲ್ಕ್ ಮಾಲಿಕ ರೀಲ್ಸ್ ಮಾಡಿರುವುದು ಆಶ್ಚರ್ಯ ಉಂಟುಮಾಡಿದೆ ಜತೆಗೆ‌ ಇದು ಎಷ್ಟು ಸರಿ ಎಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಪ್ರಶ್ನಿಸಿದ್ದಾರೆ.

ಈ ರೀತಿ ರೀಲ್ಸ್ ಮಾಡಲು ಅವಕಾಶ ವಿದೆಯೇ ಅವಕಾಶ ವಿದ್ದರೆ ಪ್ರತಿಯೊಬ್ಬರಿಗೂ ಮುಂದಿನ ದಿನಗಳಲ್ಲಿ ರಿಲ್ಸ್ ಮಾಡಲು ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಒಂದು ವೇಳೆ ರೀಲ್ಸ್ ಮಾಡಲು ಅವಕಾಶ ಇಲ್ಲದಿದ್ದಲ್ಲಿ ಕೂಡಲೇ ರೀಲ್ಸ್ ಮಾಡಿದ ವರ ಮೇಲೆ ಮತ್ತು ಅವಕಾಶ ನೀಡಿದ ಅಧಿಕಾರಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತೇಜಸ್ವಿ ನಾಗಲಿಂಗ ಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮೈಸೂರಿನ ಇತಿಹಾಸದಲ್ಲಿ ಈ ರೀತಿಯ ಪ್ರಸಂಗ ನಡೆದಿರಲಿಲ್ಲ ಕಮೀಷನರ್ ಕಚೇರಿ ಆವರಣದಲ್ಲಿ ರೀಲ್ಸ್ ಮಾಡಿರುವುದರ ಕುರಿತು ಕೂಡಲೇ ಸ್ಪಷ್ಟನೆ ನೀಡಬೇಕೆಂದು ತೇಜಸ್ವಿ ಆಗ್ರಹಿಸಿದ್ದಾರೆ.

ಒಂದು ವೇಳೆ ರೀಲ್ಸ್ ಮಾಡಲು ಅವಕಾಶ ವಿದ್ದರೆ ನಾನು ಕೂಡ ಕೆಲವೇ ದಿನಗಳಲ್ಲಿ ಕಮೀಷನರ್ ಕಚೇರಿಯಲ್ಲಿ ರೀಲ್ಸ್ ಮಾಡುತ್ತೇನೆ ನನಗೂ ಕೂಡ ರೀಲ್ಸ್ ಮಾಡಲು ಅವಕಾಶ ನೀಡಬೇಕು ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಮಾಧ್ಯಮ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.