ಅರಸು ರಸ್ತೆಯಲ್ಲಿನ ಪಿಂಕ್ ಶೌಚಾಲಯ ಪುನರಾರಂಭಕ್ಕೆ ಕ ಹಿ ವೇ ಒತ್ತಾಯ

Spread the love

ಮೈಸೂರು: ಮೈಸೂರಿನ ಡಿ ದೇವರಾಜ ಅರಸು ರಸ್ತೆ, ವಾರ್ಡ್ ನಂಬರ್ 23ರ ದಿವಾನ್ಸ್ ರಸ್ತೆಯಯಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕವಾಗಿದ್ದ‌ ಶೌಚಾಲಯವನ್ನು ಮತ್ತೆ ‌ಪ್ರಾರಂಭಿಸ ಬೇಕೆಂದು ಕರ್ನಾಟಕ ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ.

ಶೌಚಾಲಯ ಬಳಿ ಇಂದು ಸಾಂಕೇತಿಕ ಪ್ರತಿಭಟನೆ ಮಾಡಲಾಯಿತು.

ಪಿಂಕ್ ಶೌಚಾಲಯವೆಂದು ಕರ್ನಾಟಕದಲ್ಲಿ ಪ್ರಾರಂಭಿಸಿದಾಗ ಮೈಸೂರಿನಲ್ಲಿ ಮೊದಲ ಬಾರಿಗೆ ಮಹಿಳೆಯರ ಅನುಕೂಲಕ್ಕಾಗಿ ಪಿಂಕ್ ಶೌಚಾಲಯ ಉದ್ಘಾಟಿಸಲಾಗಿತ್ತು.

ಈ ಶೌಚಾಲಯದಿಂದ ಅರಸು ರಸ್ತೆಯಲ್ಲಿನ ಅಂಗಡಿ ಮಳಿಗೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ, ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳಾ ಗ್ರಾಹಕರಿಗೆ ಬಹಳ ಅನುಕೂಲವಾಗಿತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ ಒಂದು ತಿಂಗಳ ಹಿಂದೆ ಈ ಪಿಂಕ್ ಶೌಚಾಲಯವನ್ನು ಮುಚ್ಚಲಾಗಿದೆ.
ಇದರಿಂದ ಮಹಿಳೆಯರಿಗೆ ತುಂಬಾ ಸಮಸ್ಯೆಯಾಗಿದೆ,ಸುತ್ತಮುತ್ತಲ ನಿವಾಸಿಗಳ ಮನೆಗಳಿಗೆ ಹೋಗಬೇಕಾದ ಮುಜುಗರದ ಸ್ಥಿತಿ ಎದುರಾಗಿದೆ.

ಈ ಕೂಡಲೇ ಮುಚ್ಚಿರುವ ಪಿಂಕ್ ಶೌಚಾಲಯವನ್ನು ಸಂಬಂಧಪಟ್ಟ ಅಧಿಕಾರಿಗಳು ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಪಾಲಿಕೆ
ವಲಯ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್ ಎಚ್ಚರಿಕೆ ನೀಡಿದರು.

ಇಂದು ಪಿಂಕ್ ಶೌಚಾಲಯದ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಪ್ರಶಾಂತ್, ಎಸ್ ಎನ್ ರಾಜೇಶ್, ಸಂತೋಷ್, ರವಿ, ಮಂಜುನಾಥ್,ಪುಟಬುದ್ಧಿ ಮತ್ತಿತರರು ಪಾಲ್ಗೊಂಡಿದ್ದರು.