ಮೈಸೂರು: ಪಿ ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನದಲ್ಲಿ ಬಿ ಇ ವಿದ್ಯಾರ್ಥಿ ಪ್ರನವೀಹ ಜಿ ಪಿ ಅವರು ತಮ್ಮ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡರು.
ಅವರು ಭಾನುವಾರ ಪಿ ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನಕ್ಕೆ
ಬೇಟಿ ನೀಡಿ ಜನುಮದಿನ ಆಚರಿಸಿಕೊಂಡರು.
ಜತೆಗೆ ಎಲ್ಲಾ ಹಿರಿಯರಿಗೂ ಊಟದ ವ್ಯವಸ್ಥೆ ಮಾಡಿ ಅವರ ಜೊತೆ ಸಂತಸದಿಂದ ಕಾಲ ಕಳೆದರು.
ಈ ವೇಳೆ ಪ್ರನವೀಹ ಜಿ ಪಿ ಅವರಿಗೆ ಪಿ ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ನಿರ್ದೇಶಕರು ಶುಭ ಕೋರಿದರು.
ಈ ಸಂದರ್ಬದಲ್ಲಿ ಸಂಸ್ಥೆಯ ಖಜಂಚಿ ಮಂಜುಳಾ,ಸಹನಾ ಎಂ,ಅಕ್ಷಯ ಟಿ.ಎಂ,ಲೋಚನ ಎಂ,ಗೌತಮ್ ಟಿ ಎಂ ಮತ್ತಿತರರು ಹಾಜರಿದ್ದರು.