ಮೈಸೂರು: ದಸರಾ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಸಿಂಹಾಸನ ಜೋಡಣೆ ಕಾರ್ಯ ಆರಂಭ ಮಾಡಲಾಯಿತು.
ಈ ಹಿನ್ನೆಲೆ ಮಂಗಳವಾರ ಮಧ್ಯಾಹ್ನದವರೆಗೆ ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ರಾಜವಂಶ್ಥರು ನಡೆಸುವ ಧಾರ್ಮಿಕ ಕಾರ್ಯ, ಖಾಸಗಿ ದರ್ಬಾರ್‌ಗಾಗಿ ಸಿಂಹಾಸನ ಜೋಡಣೆ ನಡೆಯುತ್ತಿದೆ. ಸ್ಟ್ರಾಂಗ್ ರೂಂನಿಂದ ಬಿಗಿ ಭದ್ರತೆಯೊಂದಿಗೆ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರ ಸಮ್ಮುಖದಲ್ಲಿ ಸಿಂಹಾಸನ ಜೋಡಣೆ ಪ್ರಾರಂಭವಾಗಿದೆ.
ಚಿನ್ನದ ಸಿಂಹಾಸನದ ಬಿಡಿಭಾಗ ಹಾಗೂ ಬೆಳ್ಳಿಯ ಭದ್ರಾಸನದ ಬಿಡಿ ಭಾಗಗಳನ್ನ ದರ್ಬಾರ್ ಹಾಲ್‌ಗೆ ತಂದು ಜೋಡಣೆ ಮಾಡಲಾಗುತ್ತದೆ.
ಬೆಳ್ಳಿ ಭದ್ರಾಸನವನ್ನ ಕನ್ನಡಿ ತೊಟ್ಟಿಯಲ್ಲಿ ಜೋಡಣೆ ಮಾಡಲಾಗುವುದು. ಸಿಂಹಾಸನ ಜೋಡಣೆ ಕಾರ್ಯ ನಡೆಯುವ ವೇಳೆ ದರ್ಬಾಲ್ ಹಾಲ್ ಸೇರಿದಂತೆ ವಿವಿಧೆಡೆ ಅಳವಡಿಸಿರುವ ಸಿಸಿ ಕ್ಯಾಮೆರಾಗೆ ಪರದೆ ಹಾಕಲಾಗುವುದು.
ಸಿಂಹಾಸನ ಜೋಡಣೆ ಕಾರ್ಯದ ನಿಮಿತ್ತ ಬೆಳಗ್ಗೆಯೇ ದರ್ಬಾರ್ ಹಾಲ್‌ನಲ್ಲಿ ಗಣಪತಿ, ಚಾಮುಂಡಿ ಪೂಜೆ ಸೇರಿಂದತೆ ಕೆಲ ಹೋಮ ಹವನ ನಡೆಯಿತು.