ಮೈಸೂರು: ಮೈಸೂರು ಅರಮನೆ ಆವರಣದಲ್ಲಿ ರಥಸಪ್ತಮಿ ಸಂಭ್ರಮ ಮನೆಮಾಡಿದೆ.
7 ದೇವಾಲಯಗಳ ಉತ್ಸಮೂರ್ತಿಗಳ ಸಮಾಗಮವಾಗಿದೆ.ಉತ್ಸವ ಮೂರ್ತಿಗಳ ದರುಶನ ಪಡೆಯಲು ಭಕ್ತರ ದಂಡೇ ಹರಿದು ಬರುತ್ತಿದೆ.
ಮುಂಜಾನೆ 6 ಗಂಟೆಗೆ ಆರಂಭವಾದ ದರುಶನ ಮಧ್ಯಾಹ್ನ 12 ಗಂಟೆ ವರೆಗೂ ಮುಂದುವರೆದಿತ್ತು.
ತ್ರಿನೇಶ್ವರಸ್ವಾಮಿ,ಭುವನೇಶ್ವರಿ,ಗಾಯಿತ್ರಿ,ಲಕ್ಷ್ಮಿರಮಣಸ್ವಾಮಿ,ಪ್ರಸನ್ನಕೃಷ್ಣ,ವರಹ,ಖಿಲೆ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯದ ಉತ್ಸವಮೂರ್ತಿಗಳನ್ನ ಅಂಬಾವಿಲಾಸ ಅರಮನೆ ಆವರಣದಲ್ಲಿ ಪ್ರತಿಷ್ಠಾಪಿಸಿ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸೂರ್ಯದೇವ ತನ್ನ ಪಥವನ್ನ ಬದಲಾಯಿಸುವ ದಿನವಾದ ಇಂದು ವಿಶೇಷವಾಗಿ ರಥಸಪ್ತಮಿಯನ್ನ ಆಚರಿಸಲಾಗುತ್ತದೆ.
ಈ ಹಿಂದೆ ರಾಜಮಹಾರಾಜರ ಆಡಳಿತದ ಅವಧಿಯಲ್ಲಿ ಅರಮನೆ ಆವರಣದಲ್ಲಿರುವ ಪ್ರಮುಖ ದೇವಾಲಯಗಳ ಉತ್ಸವ ಮೂರ್ತಿಗಳನ್ನ ಒಂದೆಡೆ ಸೇರಿಸಿ ಭಕ್ತರಿಗೆ ದರುಶನ ಪಡೆಯುವ ವ್ಯವಸ್ಥೆ ಮಾಡಿದ್ದರು.ಈ ಸಂಪ್ರದಾಯ ಇಂದಿಗೂ ಮುಂದುವರೆದಿದೆ.