ಸುಬ್ರಾವ್ ಪಾರ್ಕ್ ನಲ್ಲಿ ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆ

ಮೈಸೂರು: ಮೈಸೂರಿನ ನಿವೇದಿತಾ ನಗರದಲ್ಲಿರುವ ಸುಬ್ರಾವ್ ಪಾರ್ಕ್ ನಲ್ಲಿ ಅರ್ಥಪೂರ್ಣವಾಗಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.

ಉತ್ತಮ ಗಿಡಗಳನ್ನು ನೆಟ್ಟು ನೀರು ಹಾಕುವುದರ ಮೂಲಕ ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.

ಈ ವೇಳೆ ಪರಿಸರದ ಮಹತ್ವ ಮತ್ತು ಅದನ್ನು ಸಂರಕ್ಷಿಸುವ ಅಗತ್ಯತೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.

ಪರಿಸರ ಫೌಂಡೇಶನ್ ಅಧ್ಯಕ್ಷ ಕೃಷ್ಣ ಹೆಗಡೆ, ಮಹಾರಾಣಿ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲರಾದ ಪ್ರೊಫೆಸರ್ ನಾಗರಾಜ್,ಹಿರಿಯ ನಾಗರಿಕ ವೇದಿಕೆಯ ಗೌರವಾಧ್ಯಕ್ಷ ಮುಂಚೆಗೌಡ್ರು, ನಂಜುಂಡೇಶ್ವರ ಶರ್ಮಾ ಹಾಗೂ ನಾಗರಾಜು ಮುಂತಾದವರು ಭಾಗವಹಿಸಿದ್ದರು.