ಮೈಸೂರು: ನೈರುತ್ಯ ರೈಲ್ವೆಯ ಮೈಸೂರು ವಿಭಾಗವು 76ನೇ ಗಣರಾಜ್ಯೋತ್ಸವವನ್ನು ಉತ್ಸಾಹದಿಂದ ಆಚರಿಸಿತು.
ಈ ಸಂದರ್ಭದಲ್ಲಿ ವಿಭಾಗವು ತನ್ನ ಪ್ರಮುಖ ಸಾಧನೆಗಳನ್ನು ಪ್ರದರ್ಶಿಸಿದ್ದು, ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿತು.
ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶಿಲ್ಪಿ ಅಗರವಾಲ್ ಅವರು ಮೈಸೂರು ಯಾದವಗಿರಿ ರೈಲ್ವೆ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ, ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಅವರ ಪರೇಡ್ ವೀಕ್ಷಿಸಿದರು.
ನಂತರ ಮಾತನಾಡಿದ ಶಿಲ್ಪಿ ಅಗರವಾಲ್,ಹಣಕಾಸು ವೃದ್ಧಿ, ಸುರಕ್ಷತಾ ಕ್ರಮಗಳು, ಮೂಲಸೌಕರ್ಯ ಸುಧಾರಣೆ ಮತ್ತು ಪ್ರಯಾಣಿಕರ ಸೇವೆಗಳ ವಿಷಯದಲ್ಲಿ ವಿಭಾಗದ ಅತ್ಯುತ್ತಮ ಸಾಧನೆಗಳನ್ನು ವಿವರಿಸಿದರು.
ಹಣಕಾಸಿನ ಸಾಧನೆ ಈ ಸಾಲಿನಲ್ಲಿ 1,000 ಕೋಟಿ ಮೀರಿದ ಒಟ್ಟು ಆದಾಯವನ್ನು ವಿಭಾಗ ಗಳಿಸಿದ್ದು, ಸರಕು ಆದಾಯ 649.44 ಕೋಟಿ ಮತ್ತು ಪ್ರಯಾಣಿಕರ ಆದಾಯ 315.51 ಕೋಟಿ ಆಗಿದೆ. ವಾಹನಗಳ ಸಾಗಾಟಕ್ಕಾಗಿ 73 ಎನ್‌ಎಮ್‌ಜಿ ರೇಕ್‌ಗಳನ್ನು ಲೋಡ್ ಮಾಡುವ ಮೂಲಕ ಮತ್ತು ಆಹಾರ ಧಾನ್ಯಗಳ ಸಾಗಾಟದಲ್ಲಿ ದೊಡ್ಡ ಪ್ರಮಾಣದ ಬೆಳವಣಿಗೆ ಕಂಡುಬಂದಿದೆ ಎಂದು ವಿವರಿಸಿದರು.
ಕುಂಭಮೇಳವನ್ನು ಆಚರಿಸುವ ಪ್ರಯಾಗರಾಜ್ ಸೇರಿದಂತೆ ದೇಶದಾದ್ಯಂತ ಜನಪ್ರಿಯ ಸ್ಥಳಗಳನ್ನು ಸಂಪರ್ಕಿಸಲು ವಿಶೇಷ ರೈಲುಗಳನ್ನು ಪರಿಚಯಿಸಲಾಗಿದೆ ಎಂದು ಶಿಲ್ಪಿ ಅಗರ್ ವಾಲ್ ತಿಳಿಸಿದರು.
ಆಧುನಿಕೀಕರಣ ವಿಭಾಗದ ಎಲ್ಲಾ ನಿಲ್ದಾಣಗಳಲ್ಲಿ ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ (UTS) ಏರ್ಪಡಿಸಲಾಗಿದ್ದು, ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ ಪರಿಚಯಿಸಲಾಗಿದೆ. ಇಂಟಿಗ್ರೇಟೆಡ್ ಪ್ರಯಾಣಿಕರ ಮಾಹಿತಿ ವ್ಯವಸ್ಥೆ (IPIS) ಮತ್ತು ರೈಲುಗಳ ಮಾರ್ಗದರ್ಶನ ಫಲಕಗಳು ಆರಂಭಗೊಂಡಿವೆ ಎಂದು ಮಾಹಿತಿ ನೀಡಿದರು.
ಕಲ್ಯಾಣ ಚಟುವಟಿಕೆ 342 ನೌಕರರಿಗೆ ಹಣಕಾಸು ಉನ್ನತಿ ಮತ್ತು 308 ಮಂದಿಗೆ ಪ್ರೋತ್ಸಾಹ. ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಸಿಬ್ಬಂದಿಗಾಗಿ ವಿಶೇಷ ಖಾತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಶ್ರೀಮತಿ ಅಗರವಾಲ್ ಅವರು, ಸಿಬ್ಬಂದಿಯ ತಂಡದ ಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದರು.