ಪೌರಕಾರ್ಮಿಕರ ಜೊತೆ ಹೋಳಿಗೆ ಊಟ ಸವಿದು ಯುಗಾದಿ ಆಚರಿಸಿದ ಹರೀಶ್ ಗೌಡ

Spread the love

ಮೈಸೂರು: ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡರು ಪೌರಕಾರ್ಮಿಕರಿಗೆ ಹೋಳಿಗೆ ಊಟ ಉಣಬಡಿಸಿ ಅವರೊಂದಿಗೆ ಊಟ ಸವಿದು ಯುಗಾದಿ ಹಬ್ಬ ಆಚರಿಸಿ ಮಾದರಿಯಾಗಿದ್ದಾರೆ.

ನಾರಾಯಣ ಶಾಸ್ತ್ರಿ ರಸ್ತೆ, 23ನೇ ವಾರ್ಡಿನಲ್ಲಿ ಯುಗಾದಿ ಹಬ್ಬದ ಅಂಗವಾಗಿ ಹರೀಶ್ ಗೌಡ ನಮ್ಮ ಸಮಾಜದ ಸ್ವಾಸ್ಥವನ್ನು
ಸಮರ್ಪಕವಾಗಿ ಕಾಯ್ದುಕೊಳ್ಳುವಲ್ಲಿ, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದು ಎಂಬುದನ್ನು ಸಾರಿದರು.

ಪೌರಕಾರ್ಮಿಕರೊಂದಿಗೆ ಬೆರತು ಅವರ ಕಷ್ಟ ಸುಖಗಳನ್ನು ಆಲಿಸಿ ಅವರಿಗೆ ಹೋಳಿಗೆ ಊಟದ ಆತಿಥ್ಯ ನೀಡಿ ಅವರ ಜೊತೆ ಕುಳಿತು ಉಪಹಾರ ಸೇವಿಸಿದರು.ಅದಕ್ಕೂ ಮುನ್ನ ಪೌರಕಾರ್ಮಿಕರಿಗೆ ಬೇವುಬೆಲ್ಲ ವಿತರಿಸಿ ಹಬ್ಬದ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷರಾದ ಮೈಕಾ ಪ್ರೇಮ್ ಕುಮಾರ್,ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್, ಮಹದೇವ್,ಗುರುರಾಜ್ ಶೆಟ್ಟಿ, ಪ್ರಮೋದ್ ಗೌಡ, ನವೀನ್, ಸಂದೀಪ್,ಹರೀಶ್ ಗೌಡ, ರವಿಚಂದ್ರ, ನೀತು,ಶಿವು, ರವಿ, ಎಸ್ ಎನ್ ರಾಜೇಶ್, ಸಂತೋಷ್, ಮಂಜು, ಜಗದೀಶ್
ಮತ್ತಿತರರು ಹಾಜರಿದ್ದರು.