ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ದೇವಸ್ಥಾನ ಮುಂಬಾಗ ಮತ್ತು ನದಿಯನ್ನು ಸ್ವಚ್ಚತೆ ಮಾಡುವ ಮೂಲಕ ಮೈಸೂರಿನ ಎಂಐಟಿ ಕಾಲೇಜಿನ ವಿದ್ಯಾರ್ಥಿಗಳು ಮಾದರಿಯಾಗಿದ್ದಾರೆ.
ಮೊದಲು ರಂಗನಾಥಸ್ವಾಮಿ ದೇವಸ್ಥಾನದ ಸುತ್ತಮುತ್ತ ಸ್ವಚ್ಛತೆ ನಡೆಸಿದರು.ನಂತರ ನದಿ, ಮತ್ತು ಸುತ್ತಲ ಪರಿಸರವನ್ನು ಸ್ವಚ್ಚ ಗೊಳಿಸಿದರು.

ಈ ವೇಳೆ ಸಾರ್ವಜನಿಕರಿಗೆ ಪರಿಸರದ ಬಗ್ಗೆ ನದಿಯ ಬಗೆ ಅರಿವು ಕೂಡಾ ಮೋಡಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾತನಾಡಿ,ಇದು ಆಧ್ಯಾತ್ಮಿಕ ಸ್ಥಳ ಜತೆಗೆ ಪ್ರವಾಸಿ ತಾಣ ಕೂಡಾ ಆಗಿದೆ. ಇಲ್ಲಜಗೆ ದೇಶ,ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ.ಇಲ್ಲಿನ ಪರಿಸರ ಸ್ವಚ್ಛವಾಗಿದ್ದರೆ ಅವರಿಗೆ ಒಳ್ಳೆಯ ಅಭಿಪ್ರಾಯ ಮೂಡುತ್ತದೆ ಎಂದು ಹೇಳಿದರು.
ನಮ್ಮ ಸುತ್ತಮುತ್ತಲ ಪರಿಸರ,ನದಿಗಳು ಸ್ವಚ್ಛವಾಗಿದ್ದರೆ ನಮಗೆಲ್ಲರಿಗೂ ಒಳಿತಾಗುತ್ತದೆ.ಹಾಗಾಗಿ ನಾವು ಇಂದು ದೇವಸ್ಥಾನ ಮತ್ತು ನದಿಯನ್ನು ಸ್ವಚ್ಛಮಾಡಿ ಜನರಿಗೂ ತಿಳುವಳಿಕೆ ಮೂಡಿಸಿದ್ದೇವೆ ಎಂದು ತಿಳಿಸಿದರು.