ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಸಾಮೂಹಿಕ ಸೀಮಂತ!

Spread the love

ಮೈಸೂರು: ವಿಜಯನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶ್ರೀ ದುರ್ಗಾ ಫೌಂಡೇಶನ್ ಮತ್ತು ಕೆ ವಿ ಕೆ ಫೌಂಡೇಶನ್ ವತಿಯಿಂದ 50ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ನೆರವೇರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷರಾದ ಡಾ. ಪುಷ್ಪ ಅಮರನಾಥ್ ಅವರು ಮಾತನಾಡಿ,ನಿಜಕ್ಕೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ನನ್ನ ಸೌಭಾಗ್ಯ ಎಂದು ನುಡಿದರು.

ಅರಿಶಿನ,ಕುಂಕುಮ, ಬಳೆ ಇಟ್ಟು ಬಾಗಿನ ಕೊಡುವ ನಮ್ಮ ಸಂಪ್ರದಾಯ ತುಂಬಾ ಒಳ್ಳೆಯದು ಎಂದು ಹೇಳಿದರು.

ಭಾಗಿನ ಕೊಡುವವರದು ಹಾಗೂ ತೆಗೆದು ಕೊಳ್ಳುವವರದು ಇಬ್ಬರದೂ ಸೌಭಾಗ್ಯ, ನಿಮಗೆ ಜನಿಸುವ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಎಂದು ಕಿವಿ ಮಾತು ಹೇಳಿದರು.

ಖುಷಿ ವಿನು ಮತ್ತು ಶ್ರೀ ದುರ್ಗಾ ಫೌಂಡೇಶನ್ ನ ರೇಖಾ ಅವರು ಮಹಿಳೆಯರಿಗಾಗಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ ಎಂದು ಪುಷ್ಪಾ ಅಮರ ನಾಥ್ ಮೆಚ್ಚುಗೆ‌ ವ್ಯಕ್ತಪಡಿಸಿದರು.

ಸೀಮಂತ ಮಾಡಿಕೊಂಡ ಎಲ್ಲಾ ಮಹಿಳೆಯರಿಗೂ ತಾಯಿ ಚಾಮುಂಡೇಶ್ವರಿ ಒಳಿತು ಮಾಡಲಿ ಎಂದು ಅವರು ಶುಭ ಹಾರೈಸಿದರು.

ಸೌಮ್ಯ ಅನಿಲ್ ಚಿಕ್ಕಮಾದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಬಸವರಾಜ್,ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಇಂದಿರಾ ಗಾಂಧಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ರವಿ ಮಂಚೇಗೌಡನ ಕೊಪ್ಪಲು, ಮುಖಂಡರಾದ ಜಿ ರಾಘವೇಂದ್ರ, ಕೆವಿಕೆ ಫೌಂಡೇಶನ್ ಅಧ್ಯಕ್ಷರಾದ ಖುಷಿ ವಿನು,ಕಾವ್ಯ,ಮಂಜುಳಾ
ಮತ್ತಿತರರು ‌ಹಾಜರಿದ್ದರು.