ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಕಟ್ಟಡ ಕುಸಿತ: ಅವಶೇಷಗಡಿ ಸಿಲುಕಿದ ಕಾರ್ಮಿಕ

Spread the love

ಮೈಸೂರು: ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಶಿಥಿಲವಾದ ಕಟ್ಟಡ ದುರಸ್ತಿ ಕಾಮಗಾರಿ ವೇಳೆ ಕಟ್ಟಡ ಕುಸಿದು ಒಬ್ಬ ಕಾರ್ಮಿಕ ಮಣ್ಣಿನಡಿ ಸಿಲುಕಿದ ಘಟನೆ ನಡೆದಿದೆ.

ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಘಟನೆ ನಡೆದಿದ್ದು ಅವಶೇಷಗಳಡಿ ಕಾರ್ಮಿಕ ಸಿಲುಕಿದ್ದು ರಕ್ಷಣಾ ಕಾರ್ಯ ನಾಳೆಯೂ ಮುಂದುವರಿಯಲಿದೆ.

ಮಹಾರಾಣಿ ಕಾಲೇಜು ಕಟ್ಟಡ ಶಿಥಿಲಗೊಂಡಿತ್ತು. ಈ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದ ಕಿಟಕಿ ತೆಗೆದು ಬೇರೆ ಅಳವಡಿಸುವಾಗ ಕಟ್ಟಡ ಕುಸಿದಿದೆ.

ಸದ್ದಾಂ ಎಂಬ ಕಾರ್ಮಿಕ ಅವಶೇಷಗಳಡಿ ಸಿಲುಕಿದ್ದಾನೆ.ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ರಕ್ಷಣಾ ಕಾರ್ಯ ಕೈಗಂಡರು.

ರಕ್ಷಣಾ ಕಾರ್ಯ ಮುಂದುವರಿಯ ಲಿರುವುದರಿಂದ ತೊಂದರೆ ಆಗಬಾರದೆಂಬ ಹಿನ್ನೆಲೆಯಲ್ಲಿ ‌ನಾಳೆ ಮಹಾರಾಣಿ ಕಾಲೇಜಿಗೆ ರಜೆ ನೀಡುವಂತೆ ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.