ಲಾರಿ ಮಾಲೀಕರು, ಚಾಲಕರು ಮುಷ್ಕರ:ಮೈಸೂರಿನಲ್ಲೂ ರಸ್ತೆಗಿಳಿಯದ ಲಾರಿಗಳು

Spread the love

ಮೈಸೂರು: ಡೀಸಲ್ ಬೆಲೆ ಏರಿಕೆ, ಟೋಲ್ ದರ ಹೆಚ್ಚಳ ಖಂಡಿಸಿ ರಾಜ್ಯಾದ್ಯಂತ ಲಾರಿ ಮಾಲೀಕರು, ಚಾಲಕರು ಮುಷ್ಕರ ಕೈಗೊಂಡಿದ್ದು ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ,ಒಂದೂ ಲಾರಿ ರಸ್ತೆಗಿಳಿದಿಲ್ಲ.

ಲಾರಿ ಮುಷ್ಕರ ಹಿನ್ನೆಲೆಯಲ್ಲಿ ಲಾರಿಗಳು ರಸ್ತೆಗಿಳಿಯದೆ ಹಾಗೆ ನಿಂತಿವೆ.ಸುಮಾರು 9 ಸಾವಿರ ಗೂಡ್ಸ್ ಲಾರಿಗಳು ಸಂಪೂರ್ಣ ಸ್ತಬ್ಧ ವಾಗಿವೆ.

ಅಗತ್ಯ ವಸ್ತುಗಳ ಸೇವೆ ಹೊರತು ಪಡಿಸಿ ಉಳಿದ ಸೇವೆಗಳಿಗೆ ನಿರ್ಬಂಧಿಸಲಾಗಿದೆ.

ಡೀಸೆಲ್ ದರ ಕಡಿಮೆ ಮಾಡಬೇಕು, ಟೋಲ್ ದರ ರದ್ದುಗೊಳಿಸಬೇಕು, ಆರ್ ಟಿ ಒ ಗಡಿ ಚೆಕ್ ಪೋಸ್ಟ್ ರದ್ದುಗೊಳಿಸಬೇಕು, ಎಫ್ ಸಿ ಶುಲ್ಕವನ್ನ ಕಡಿಮೆ ಮಾಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾರಿ ಮಾಲೀಕರು ಚಾಲಕರು ಮುಷ್ಕರ ನಡೆಯುತ್ತಿದ್ದಾರೆ.

ನಗರದ ಬನ್ನಿಮಂಟಪದ ಗೂಡ್ಸ್ ಶೆಡ್ ಬಳಿ ಲಾರಿಗಳು ರಸ್ತೆಗಿಳಿಯದೆ ಹಾಗೆಯೇ ನಿಂತಿವೆ.

ಗೂಡ್ಸ್ ರೈಲಿನಲ್ಲಿ ಬಂದಿರುವ ರೈತರ ರಸಗೊಬ್ಬರವನ್ನ ಅನ್ ಲೋಡ್ ಮಾಡದೆ ಹಾಗೆಯೇ ಲಾರಿ ಮಾಲೀಕರು ಮತ್ತು ಚಾಲಕರು ಮುಷ್ಕರದ ಭಾಗಿಯಾಗಿದ್ದಾರೆ.

ಬೇಡಿಕೆ ಈಡೇರುವವರೆಗೂ ಸೇವೆ ಆರಂಭಿಸುವುದಿಲ್ಲ ಮುಷ್ಕರ ಮುಂದುವರೆಯಲಿದೆ ಎಂದು ಮೈಸೂರು ಲಾರಿ ಮಾಲೀಕರ ಮತ್ತು ಚಾಲಕರ ಒಕ್ಕೂಟ ತಿಳಿಸಿದೆ.