ಮೈಸೂರು: ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಅಂತರ ರಾಷ್ಟ್ರೀಯ ಲಯನ್ಸ್ ಜಿಲ್ಲೆ 317G ಜಿಲ್ಲಾ ರಾಜ್ಯಪಾಲರಾಗಿ ಜಿಲ್ಲಾ ರಾಜ್ಯಪಾಲ ಲಯನ್ ಕೆ.ಎಲ್. ರಾಜಶೇಖರ್
ಅಧಿಕಾರ ಸ್ವೀಕರಿಸಿದ್ದಾರೆ.
ಕೆ.ಎಲ್.ರಾಜಶೇಖರ್ ಅವರು ವರ್ಷದ ಆರಂಭದಲ್ಲೇ ಹಲವು ದಾಖಲೆಗಳ ಇತಿಹಾಸ ಸೃಷ್ಟಿಸಿದ್ದಾರೆ.
ಪ್ರತಿ ವರ್ಷ ಜುಲೈ 1 ರಂದು ಪ್ರಾರಂಭವಾಗುವ ನೂತನ ಲಯನ್ಸ್ ವರ್ಷದಲ್ಲಿ 2ನೇ ದಿನಾಂಕದಂದು ಒಂದೇ ದಿನ 9 ನೂತನ ಲಯನ್ಸ್ ಸಂಸ್ಥೆಗಳ ಉದಯಕ್ಕೆ ನಾಂದಿ ಹಾಡಿದ್ದಾರೆ.
ಮಂಡ್ಯ ಸೌಹಾರ್ದ ಲಯನ್ಸ್ ಸಂಸ್ಥೆ, ಮಂಡ್ಯ ಸಕ್ಕರೆ ಸಿರಿ ಲಯನ್ಸ್ ಸಂಸ್ಥೆ, ಪಾಂಡವಪುರ ಅಮ್ಮನ ಆಸರೆ ಲಯನ್ಸ್ ಸಂಸ್ಥೆ,
ಪಾಂಡವಪುರ ಅಕ್ಷಯ ಲಯನ್ಸ್ ಸಂಸ್ಥೆ,ಮೈಸೂರು ಸೌಹಾರ್ದ ಲಯನ್ಸ್ ಸಂಸ್ಥೆ, ಹುಣಸೂರು ಪ್ರೈಡ್ ಲಯನ್ಸ್ ಸಂಸ್ಥೆ
ಹುಣಸೂರು ಹೆರಿಟೇಜ್ ಲಯನ್ಸ್ ಸಂಸ್ಥೆ,
ಮೈಸೂರು ಸಂತೃಪ್ತಿ ಲಯನ್ಸ್ ಸಂಸ್ಥೆ,
ಮೈಸೂರು ಕಿತ್ತೂರು ರಾಣಿ ಚೆನ್ನಮ್ಮ ಲಯನ್ಸ್ ಸಂಸ್ಥೆಗಳು ಪ್ರಾರಂಭಗೊಂಡಿವೆ.
ವರ್ಷಾರಂಭದಲ್ಲಿಯೇ 317G ಜಿಲ್ಲೆ ಉತ್ತಮ ಆರಂಭ ನೀಡಿದೆ. ಇದಲ್ಲದೇ ಅಂದೇ ಮದ್ಯಾಹ್ನ ಜಿಲ್ಲೆಯ ಆಯೋಗಗಳ ಸಮಾವೇಶ ನಡೆಸಲಾಯಿತು.
ಕುವೆಂಪುನಗರ ಲಿಯೊ ಸಂಸ್ಥೆ,
ವಿಶ್ವಮಾನವ ಕುವೆಂಪು ಲಿಯೊ ಸಂಸ್ಥೆ,
ಆಸರೆ ಲಿಯೊ ಸಂಸ್ಥೆಗಳನ್ನು ನೂತನವಾಗಿ ಪ್ರಾರಂಭಿಸಿದ ಜಿಲ್ಲೆ 317G ಯ ಅಡಿಯಲ್ಲಿ ನೂತನ ಲಿಯೊ ಜಿಲ್ಲೆಯನ್ನು ಆರಂಭಿಸಿದರು.
ಎರಡು ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದ
ಲಯನ್ ಕೆ. ಎಲ್. ರಾಜಶೇಖರ,
ಜಿಲ್ಲಾ ರಾಜ್ಯಪಾಲರು ಜಿಲ್ಲೆ 317G
ಲಯನ್. ಕೆ. ದೇವೇಗೌಡ,ಜಿಎಟಿ ಏರಿಯಾ ಕೋ-ಆರ್ಡಿನೇಟರ್ ಎಂಡಿ 317
ಲಯನ್. ಬಿ. ಎಸ್. ರಾಜಶೇಖರಯ್ಯ,ಜಿಎಂಟಿ ಕೋ -ಆರ್ಡಿನೇಟರ್ ಎಂಡಿ 317 ಲಯನ್. ಎಸ್. ಮತಿದೇವಕುಮಾರ್, ಮೊದಲನೇ ಉಪ ರಾಜ್ಯಪಾಲರು ಲಯನ್. ಟಿ. ನಾರಾಯಣ ಸ್ವಾಮಿ, ಎರಡನೇ ಉಪ ರಾಜ್ಯಪಾಲರು
ಲಯನ್. ಜಿ.ಎ. ರಮೇಶ, ಮಾಜಿ ಜಿಲ್ಲಾ ರಾಜ್ಯಪಾಲರು ಲಯನ್. ದೀಪಕ್ ಸುಮನ್, ಮಾಜಿ ಜಿಲ್ಲಾ ರಾಜ್ಯಪಾಲರು ಲಯನ್. ಎಂ. ಸಿದ್ದೇಗೌಡ, ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್. ಕೆ. ಎಸ್. ಸುನೀಲ್ ಕುಮಾರ್, ಜಿಲ್ಲಾ ಸಂಪುಟ ಖಜಾಂಚಿ ಲಯನ್. ಎಂ. ಸಿ. ನಂದಕುಮಾರ್, ಎಡಿಸಿಸ್ ಒರಿಯೇನ್ಟೇಷನ್ ಲಯನ್. ಜಯಕುಮಾರ್,ಜಿಎಂಟಿ ಕೋ -ಆರ್ಡಿನೇಟರ್,ಲಯನ್. ವಿ. ಹರ್ಷ,ಜಿಇಟಿ ಕೋ -ಆರ್ಡಿನೇಟರ್ ಲಯನ್.ಎ. ಕಾಂತರಾಜು. ಲಿಯೊ ಜಿಲ್ಲಾಧ್ಯಕ್ಷರುಗಳು ನೂತನ ಸಂಸ್ಥೆಗಳಿಗೆ ಶುಭಕೋರಿದರು.
ಅತೀ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ಲಿಯೊಗಳು ಮತ್ತು ಲಯನ್ಸ್ ಗಳು ಜಿಲ್ಲೆಯ ಈ ಮಹತ್ತರ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದರು.