ಮೈಸೂರು: 12ನೆ ಶತಮಾನದ ಮಹಾನ್ ಶಿವಶರಣೆ ಅಕ್ಕಮಹಾದೇವಿ ಮಹಿಳೆಯರ ಸ್ವಾಭಿಮಾನದ ಸಂಕೇತ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ತಿಳಿಸಿದರು.
ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ಕೆ ವಿ ಕೆ ಫೌಂಡೇಶನ್ ವತಿಯಿಂದ
ಅಕ್ಕಮಹಾದೇವಿ ಜಯಂತಿ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಅವರು,ಅಕ್ಕನ ವಚನಗಳಲ್ಲಿ ಸಾಮಾಜಿಕ ಮತ್ತು ವೈಜ್ಞಾನಿಕ ಚಿಂತನೆಯ ವಿಷಯಗಳಿದ್ದು ಅವು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಅಕ್ಕನ ವಚನಗಳನ್ನು ನಮ್ಮ ಮಕ್ಕಳಿಗೆ ಕಲಿಸಿದರೆ ಅವುಗಳನ್ನು ಮುಂದಿನ ಜನಾಂಗಕ್ಕೂ ಪರಿಚಯಿಸಿದಂತಾಗುತ್ತದೆ ಮತ್ತು ಆಚರಣೆಗೆ ಮಹತ್ವ ಬರುತ್ತದೆ ಎಂದು ಸಲಹೆ ನೀಡಿದರು.
ಕೆವಿಕೆ ಫೌಂಡೇಶನ್ ಅಧ್ಯಕ್ಷರಾದ ಖುಷಿ ವಿನು
ಮಾತನಾಡಿ,ಪ್ರಪಂಚದ ಇತಿಹಾಸದಲ್ಲಿ ಅಕ್ಕಮಹಾದೇವಿಯಂತಹ ವ್ಯಕ್ತಿತ್ವದ ಮಹಿಳೆ ಬೇರೆ ಎಲ್ಲಿಯೂ ಸಿಗುವುದಿಲ್ಲ. ವಿಶ್ವಕ್ಕೆ ಒಬ್ಬಳೇ ಅಕ್ಕಮಹಾದೇವಿ ಎಂದು ಹೇಳಿದರು.
ಸಾಧಕರುಗಳಾದ ಸುಗುಣಾವತಿ,ನಾಗರತ್ನ ಆರ್,ಉಮಾದೇವಿ,ಜೂಲಿಯಟ್
ರಂಜಿತ,ಸುಶೀಲ ಅವರನ್ನು ಈ ವೇಳೆ
ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ್, ನಿವೃತ್ತ ಪೊಲೀಸ್ ಅಧಿಕಾರಿ ಡಾಕ್ಟರ್ ಹೆಚ್ ಎಲ್ ಶಿವಬಸಪ್ಪ, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಸತ್ಯಸಾಯಿ ಸುರಕ್ಷಾ ಕೇಂದ್ರ ಅಧ್ಯಕ್ಷೆ ಸರಸ್ವತಿ ಹಲಸಗಿ,
ಗೃಹ ರಕ್ಷಕೀಯರ ಘಟಕ ಅಧಿಕಾರಿ ಕಾಮಾಕ್ಷಿ ಪಿ ಎಲ್,ಪುಷ್ಪಲತಾ,ಕೋಮಲ,ಸವಿತಾ ಘಾಟ್ಗೆ , ಪುಷ್ಪಲತಾ, ಸುಜಾತಾ, ಸುವರ್ಣಮ್ಮ,ಜ್ಯೋತಿ ಮತ್ತಿತರರು ಹಾಜರಿದ್ದರು,