ಮೈಸೂರು: ಮೈಸೂರಿನ ಅಗ್ರಹಾರದ ಕೃಷ್ಣರಾಜೇಂದ್ರ ಬ್ಯಾಂಕಿನ 2026ರ ದಿನದರ್ಶಿಕೆಯನ್ನು ಹೊರತರಲಾಗಿದ್ದು,
ಭಾನುವಾರ ಬಿಡುಗಡೆ ಮಾಡಲಾಯಿತು.
ಕೆ.ಆರ್. ಬ್ಯಾಂಕಿನ ಅಧ್ಯಕ್ಷ ಬಸವರಾಜು ಬಸಪ್ಪ ಹಾಗೂ ಸಹಕಾರ ಇಲಾಖೆಯ ಉಪ ನಿಬಂಧಕ ವೀರೇಂದ್ರ ಅವರು ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿದರು.
ಈ ವೇಳೆ ಉಪ ನಿಬಂಧಕ ವೀರೇಂದ್ರ ಅವರು ಮಾತನಾಡಿ, ಗ್ರಾಹಕರಿಗೆ ಸೇವಾ ಸೌಲಭ್ಯ ಬ್ಯಾಂಕಿನ ವತಿಯಿಂದ ನಿರಂತರವಾಗಿ ತಲುಪಲಿ. ಬ್ಯಾಂಕ್ ಯಶಸ್ವಿಯಾಗಿ ಮುಂದುವರಿಯಲಿ, ಇದಕ್ಕೆ ಬೇಕಾದ ಎಲ್ಲ ಸಹಕಾರವನ್ನು ಇಲಾಖೆ ಕೊಡಲಿದೆ ಎಂದು ತಿಳಿಸಿದರು.
ಬ್ಯಾಂಕಿನ ಅಧ್ಯಕ್ಷ ಬಸವಾರಾಜು ಬಸಪ್ಪ ಮಾತನಾಡಿ, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೀಕೃತ ಕಟ್ಟಡವನ್ನು ಉದ್ಘಾಟಿಸಿದರು ಎಂದು ಹೇಳಿದರು.
ಬ್ಯಾಂಕಿನ ಅಭಿವೃದ್ಧಿಗೆ ನಮ್ಮ ಆಡಳಿತ ಮಂಡಳಿಯ ಎಲ್ಲರ ಸಹಕಾರವಿದೆ. ಮುಂದಿನ ದಿನಗಳಲ್ಲಿ ಹೊಸ ಹೊಸ ಶಾಖೆಗಳನ್ನು ತೆರೆಯುವ ಆಲೋಚನೆ ಇದೆ. ಬ್ಯಾಂಕಿನ ಎಲ್ಲ ಸದಸ್ಯರಿಗೆ ಕ್ಯಾಲೆಂಡರ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ನಂ.ಸಿದ್ದಪ್ಪ, ಹೆಚ್. ವಾಸು, ಪ್ರತಿದ್ವನಿ ಪ್ರಸಾದ್, ನಾಗಜ್ಯೋತಿ, ಪಂಚಾಕ್ಷರಿ, ಗಣೇಶ ಮೂರ್ತಿ, ಶಿವಪ್ರಕಾಶ್, ಅಧಿಕಾರಿಗಳಾದ ಸಹಾಯಕ ನಿರೀಕ್ಷಕ ಕೆ.ರಾಜು, ಕೆಆರ್ ಬ್ಯಾಂಕಿನ ಮ್ಯಾನೇಜರ್ ಅನಂತ ವೀರಪ್ಪ ಮತ್ತಿತರರು ಹಾಜರಿದ್ದರು.
ಕೆ ಆರ್ ಬ್ಯಾಂಕಿನ ನೂತನ ದಿನದರ್ಶಿಕೆ ಬಿಡುಗಡೆ