ಕೆ ಆರ್ ಬ್ಯಾಂಕ್ ನಲ್ಲಿ ಬಯೋಮೆಟ್ರಿಕ್ ತಂತ್ರಜ್ಞಾನ ವ್ಯವಸ್ಥೆಗೆ ಚಾಲನೆ

ಮೈಸೂರು: ಅಗ್ರಹಾರ ವೃತ್ತದಲ್ಲಿರುವ ಶ್ರೀ ಕೃಷ್ಣ ರಾಜೇಂದ್ರ ಸಹಕಾರಿ ಬ್ಯಾಂಕ್ ಸಿಬ್ಬಂದಿಗೆ ಸಮವಸ್ತ್ರ ಹಾಗೂ ಬಯೋಮೆಟ್ರಿಕ್, ಸದ್ಯಸರಿಗೆ ತಂತ್ರಜ್ಞಾನ ವ್ಯವಸ್ಥೆಗೆ ಚಾಲನೆ ನೀಡಲಾಯಿತು.

ಕೆಆರ್ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ್ ಬಸಪ್ಪ ಅವರು ಇದಕ್ಕೆ‌ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಇಂದಿನಿಂದ ಬ್ಯಾಂಕ್ ನಲ್ಲಿ ತಂತ್ರಜ್ಞಾನ ಕಾರ್ಯ ಪ್ರಾರಂಭವಾಗಿದೆ, ಗ್ರಾಹಕರು ಸಿಬ್ಬಂದಿ ಹಾಗೂ ಸದ್ಯಸ್ಯರುಗಳ ಶ್ರೇಯಾಭಿವೃದ್ಧಿಗಾಗಿ ನೂತನ ವ್ಯವಸ್ಥೆ ಮಾಡಲಾಗುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು,

ಬ್ಯಾಂಕ್ ನಲ್ಲಿನ ಸುರಕ್ಷತೆ, ಗುಣಮಟ್ಟ ಮತ್ತು ಗ್ರಾಹಕರ ನಂಬಿಕೆಯನ್ನು ಹೆಚ್ಚಿಸಲು ತಂತ್ರಜ್ಞಾನದ ಬಳಕೆ ಮಾಡಲಾಗುತ್ತಿದೆ, ಸದಸ್ಯರ ಅನುಭವವನ್ನು ಹೆಚ್ಚಿಸುವ ಜೊತೆಗೆ ವೈಹಿವಾಟು ಹೆಚ್ಚಿಸಲು ಹಾಗೂ ಹೆಚ್ಚು ಸುರಕ್ಷಿತವಾಗಿವೆ ಎಂದು ಖಚಿತ ಪಡಿಸಿಕೊಳ್ಳಲು ಬಯೋಮೆಟ್ರಿಕ್ ಮಾಹಿತಿಯನ್ನು ಬಳಸುವ ತಂತ್ರಜ್ಞಾನವನ್ನು ಬ್ಯಾಂಕ್ ನಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.

ಬ್ಯಾಂಕಿನ ವೈವಾಟಿನ ಬಗ್ಗೆ ಪ್ರತಿಯೊಬ್ಬ ಸದಸ್ಯರ ಮೊಬೈಲ್ ಗಳಿಗೆ ಸಂದೇಶ ರವಾನೆ ಮಾಡಲಾಗುವುದು ಎಂದು ಬಸವರಾಜ್ ಬಸಪ್ಪ ಹೇಳಿದರು.

ಈ ಸಂದರ್ಭದಲ್ಲಿ ಕೆ ಆರ್ ಬ್ಯಾಂಕ್ ಉಪಾಧ್ಯಕ್ಷರಾದ ಸರ್ವಮಂಗಳ, ಎಚ್ ವಾಸು,ನಮ್ ಸಿದ್ದಪ್ಪ, ಹೆಚ್ ವಿ ಭಾಸ್ಕರ್, ಎಂ. ಡಿ ಪಾರ್ಥಸಾರಥಿ, ಜಿ ಎಂ ಪಂಚಾಕ್ಷರಿ, ಶಿವಪ್ರಕಾಶ್,ಪ್ರತಿದ್ವನಿ ಪ್ರಸಾದ್, ನವೀನ್ ಕುಮಾರ್,ಗಣೇಶ್ ಮೂರ್ತಿ,ಅರುಣ್ ಸಿದ್ದಪ್ಪ, ನಾಗಜೋತಿ,ಕಾರ್ಯದರ್ಶಿ ಅನಂತ ವೀರಪ್ಪ ಮತ್ತಿತರರು ಹಾಜರಿದ್ದರು.