ಉತ್ತಮ ಶಿಕ್ಷಣ ಪಡೆದ ಮಕ್ಕಳು ನಾಡಿನ ಅಸ್ತಿ- ಯು.ಟಿ.ಖಾದರ್

ಮೈಸೂರು, ಮಾ.12: ಉತ್ತಮ ಶಿಕ್ಷಣ ಪಡೆದ ಮಕ್ಕಳು ನಾಡಿನ ಅಸ್ತಿಯಾಗುತ್ತಾರೆ ಎಂದು ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.

ಮೈಸೂರಿನ ವಿವೇಕಾನಂದನಗರದ ಕಿಡ್‌ಜೀ ಫ್ರೀ ಸ್ಕೂಲಿನ ವಾರ್ಷಿಕೊತ್ಸವ ನವ ವೈಭವ-2025ರ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಧಾನ ಸಭಾಧ್ಯಕ್ಷರು ಮಾತನಾಡಿದರು.

ನಮ್ಮ ದೇಶದ ಸದೃಡ ಮತ್ತು ಉತ್ತಮ ಭವಿಷ್ಯಕ್ಕಾಗಿ ಪ್ರತಿಯೊಂದು ಮಗು ಗುಣಮಟ್ಟದ ಶಿಕ್ಷಣ ಪಡೆಯುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು.

ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿವೇಕಾನಂದನಗರದ ಕಿಡ್ಸ್‌ ಜೀ ಫ್ರೀ ಸ್ಕೂಲಿನ ಸಾಧನೆ ಮತ್ತು ಚಟುವಟಿಕೆಗಳ ಬಗ್ಗೆ ಯು.ಟಿ.ಖಾದರ್ ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿಶ್ರಾಂತ ಮುಖ್ಯ ಅಭಿಯಂತರ ಶಂಕರ್ ದೇವನೂರು, ಎಸಿಪಿ ಡಾ. ಪ್ರಿಯದರ್ಶಿನಿ ಸಾಣಿಕೊಪ್ಪ, ಡಾ ಸಂತೋಷ ನವಲೂರು, ಸೆಂಟರ್ ಮುಖ್ಯಸ್ಥ ಗಿರೀಶ್ ಕೆ ಎಸ್ ಮತ್ತು ಶಾಲೆಯ ಮುಖ್ಯ ಶಿಕ್ಷಕಿ ನಂದಿನಿ ಮತ್ತಿತರರು ಭಾಗವಹಿಸಿದ್ದರು.