ಮೈಸೂರು: ಮೈಸೂರಿನ ಕರುಣೆ ಸೇವಾ ಟ್ರಸ್ಟ್ ವತಿಯಿಂದ ಹಿರಿಯ ನಾಗರಿಕರಿಗೆ ಮತ್ತು ಮಾನಸಿಕ ಅಸ್ವಸ್ಥರಿಗೆ ಊಟ ಹಾಗೂ ದಿನಬಳಕೆ ವಸ್ತುಗಳನ್ನು ನೀಡಿ ಆರೋಗ್ಯ ವಿಚಾರಿಸಲಾಯಿತು.
ಪಂಪ ಹೌಸ್ ಮುಖ್ಯರಸ್ತೆಯಲ್ಲಿರುವ ಪ್ರಕೃತಿ ಆಶ್ರಮದ ಹಿರಿಯ ನಾಗರಿಕರು ಮತ್ತು ಮಾನಸಿಕ ಅಸ್ವಸ್ಥರ ಕುಟೀರಕೆ ಭೇಟಿ ನೀಡಿ ಊಟ ಹಾಗೂ ದಿನಬಳಕೆ ವಸ್ತುಗಳನ್ನು ನೀಡಿ ಸೇವಾ ಕಾರ್ಯ ಮಾಡಲಾಯಿತು.
ಈ ವೇಳೆ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ರುಕ್ಮಿಣಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳಿಗೆ ಹಲವು ರೀತಿಯ ತರಬೇತಿಗಳನ್ನು ಕೊಡುವುದರ ಮೂಲಕ ಸ್ವ ಉದ್ಯೋಗಿಗಳನ್ನಾಗಿ ಮಾಡುವುದು ಮತ್ತು ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ವೇತ, ಕಾರ್ಯದರ್ಶಿ ಮಮತಾ, ನಿರ್ದೇಶಕರಾದ ಪುಷ್ಪ, ಖಜಾಂಚಿ ಜಿ ನಂದನ್ ಕುಮಾರ್ ಹಾಗೂ ಆಶ್ರಮದ ಮೋಹನ್, ಪ್ರವೀಣ್ ಪಿ ಕೆ ಮತ್ತಿತರರು ಹಾಜರಿದ್ದರು.