ಮೈಸೂರು: ದೀಪೋತ್ಸವ ಮನಸ್ಸಿನ
ಕಲ್ಮಶ ತೊಳೆದು ಜ್ಞಾನದ ಬೆಳಕು ಹಚ್ಚುವ ಉತ್ಸವಗಳಾಗಬೇಕು ಎಂದು ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಡಾಕ್ಟರ್ ಎಸ್ ಸೋಮಸುಂದರ್ ದೀಕ್ಷಿತ್ ಹೇಳಿದರು.
ಮೈಸೂರು ಕಲ್ಯಾಣಗಿರಿ, ಡಾಕ್ಟರ್ ರಾಜಕುಮಾರ್ ರಸ್ತೆಯಲ್ಲಿರುವ ಶ್ರೀ ಕಲ್ಯಾಣ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದ ಎದುರು ವಿಷ್ಣು ದೀಪೋತ್ಸವ ಪ್ರಯುಕ್ತ
ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವಕ್ಕೆ ಚಾಕನೆ ನೀಡಿ ಅವರು ಮಾತನಾಡಿದರು.
ದೀಪೋತ್ಸವ ಎಂಬುದು ದೀಪಗಳನ್ನು
ಬೆಳಗುವುದನ್ನು ಸೂಚಿಸುತ್ತದೆ. ಹಣತೆ ನಮ್ಮ ದೇಹವನ್ನು ಸಂಕೇತಿಸಿದರೆ ಬೆಳಕು ನಮ್ಮ ಆತ್ಮವನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.
ಲಕ್ಷದೀಪೋತ್ಸವದಲ್ಲಿ ನೂರಾರು ಭಕ್ತರು ದೀಪ ಬೆಳಗಿಸಿದರು.
ಲಕ್ಷ ದೀಪೋತ್ಸವಕ್ಕೂ ಮುನ್ನ ದೇವರಿಗೆ ವಿಶೇಷ ಅಲಂಕಾರದೊಂದಿಗೆ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಸಲ್ಲಿಸಲಾಯಿತು.
ಸಾಮ್ರಾಜ್ಯ ಮಹಾಲಕ್ಷ್ಮೀ ಯಾಗ, ಪೂರ್ಣಾಹುತಿ, ಅನ್ನದಾನ, ಭಜನಾ ಕಾರ್ಯಕ್ರಮ ಸೇರಿದಂತೆ ವಿವಿಧ ಕೈಂಕರ್ಯ ಗಳು ನೆರವೇರಿದವು.
ದೇಮಗೆ ಪೂಜೆ ಸಲ್ಲಿಸಿದ ಭಕ್ತರು, ವಿಶೇಷ ಅಲಂಕಾರ, ಹೋಮದ ಸೇವೆ, ಅಲಂಕಾರ ಸೇವೆ, ಅನ್ನದಾನ, ಪ್ರಸಾದ ಸೇವೆ, ಸುವರ್ಣ ಪುಷ್ಪ ಅಷ್ಟೋತ್ತರ ಸೇವೆ, ಮಹಾಸಂಕಲ್ಪ, ಕಮಲ ಪುಷ್ಪಾರ್ಚನೆ ಸೇವೆ, ತುಪ್ಪದ ದೀಪ, ಕಂಕಣ ಕಟ್ಟುವುದು, ಸಾಲಿಗ್ರಾಮ ಅವಧೃತ ತೀರ್ಥಸ್ನಾನ, ದೀಪೋತ್ಸವಕ್ಕೆ ಎಣ್ಣೆ ಸೇರಿದಂತೆ ವಿವಿಧ ಸೇವೆಗಳ ಮೂಲಕ ಕೃತಾರ್ಥರಾದರು.
ಆರ್‌ಎಸ್‌ಎಸ್ ಜೇಷ್ಠ ಪ್ರಚಾರಕರಾದ ಸು.ರಾಮಣ್ಣ, ದೇವಸ್ಥಾನದ ಸಂಸ್ಥಾಪಕ ಹೆಚ್.ಜಿ.ಗಿರಿಧರ, ಯೋಗಾನಂದ, ಅಭಿಸ್ಟಾ, ದರ್ಶನ್, ರವಿಚಂದ್ರ, ಶ್ರೀನಿಧಿ, ನಿಕಿತ್, ಪಂಪಾಪತಿ ಮತ್ತಿತರರು ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು.