ಕಾಳಿದಾಸ ರಸ್ತೆಯಲ್ಲಿ ಮ್ಯಾನ್ ಹೋಲ್ ಕುಸಿದು ಜನರ‌ ಪರದಾಟ

Spread the love

ಮೈಸೂರು: ಮೈಸೂರಿನ ಪ್ರತಿಷ್ಠಿತ ಕಾಳಿದಾಸ ರಸ್ತೆ ಮಧ್ಯಭಾಗದಲ್ಲಿ ಮ್ಯಾನ್ ಹೋಲ್ ಕುಸಿದು ಜನರಿಗೆ,ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ.

ರಸ್ತೆ ಮಧ್ಯಭಾಗದಲ್ಲಿರುವ ಮ್ಯಾನ್ ಹೋಲ್ ಕುಸಿದು ಒಂದು ತಿಂಗಳು ಕಳೆದಿದ್ದರೂ ಪಾಲಿಕೆಯ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ.

ಈ ರಸ್ತೆಯಲ್ಲಿ ಸದಾಕಾಲ ವಾಹನ ಸಂಚಾರ ಇರುತ್ತದೆ.ಮ್ಯಾನ್ ಬಳಿ ಕೇವಲ ಎರಡು ಬ್ಯಾರಿಕೇಡ್ ಗಳನ್ನ ನಿಲ್ಲಿಸಿದ್ದಾರೆ, ವಾಹನ ಸವಾರರು ಪರದಾಡುವಂತಾಗಿದೆ.

ಆಗಾಗ ಬ್ಯಾರಿಕೇಡ್ ಗಳು ಉರುಳಿ ಬೀಳುತ್ತದೆ.ಸಾರ್ವಜನಿಕರ ಬಂದು ಬ್ಯಾರಿಕೇಡ್ ಎತ್ತಿ ನಿಲ್ಲಿಸುತ್ತಾರೆ.ರಾತ್ರಿವೇಳೆ ಬ್ಯಾರಿಕೇಡ್ ಸರಿಯಾಗಿ ಕಾಣದೆ ಅನಾಹುತವಾದ‌ ಉದಾಹರಣೆ ಇದೆ.

ಹೆಚ್ಚು ಅನಾಹುತ ಸಂಭವಿಸುವ ಮುನ್ನ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು
ಕುಸಿದ ಮ್ಯಾನ್ ಹೋಲ್ ಸರಿಪಡಿಸಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.