ಹಾಸ್ಟೆಲ್ ಜೀವನ ಹೆಣ್ಣು ಮಕ್ಕಳಿಗೆ ಜೀವನ ನಡೆಸಲು ಮಾರ್ಗದರ್ಶಿ:ಡಾ.ಮಾಲತಿ

Spread the love

ಮೈಸೂರು: ಹಾಸ್ಟೆಲ್ ಜೀವನ ಹೆಣ್ಣು ಮಕ್ಕಳಿಗೆ ಮುಂದಿನ ಜೀವನವನ್ನು ನಡೆಸಲು ಒಂದು ಮಾರ್ಗದರ್ಶಿ ಎಂದು ನಂಜನಗೂಡು ಸರ್ಕಾರಿ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರೂ ಹಾಗೂ ಸಾಹಿತಿಗಳಾದ ಡಾ.ಮಾಲತಿ ತಿಳಿಸಿದರು.

ಮೈಸೂರಿನ ಜೆ ಎಸ್ ಎಸ್ ಮಹಿಳಾ ವಸತಿ ನಿಲಯಗಳ ಸಮುಚ್ಚಯದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಸತಿ ನಿಲಯ ಶಿಸ್ತು ಹಾಗೂ ಜೀವನವನ್ನು ಕಲಿಸುವ ಒಂದು ಪಾಠಶಾಲೆ ಎಂದು ಹೇಳಿದರು.

ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ರೂಪ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ನಿಲಯ ಪಾಲಕರಾದ ಮಮತಾ ಸುರೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾರ್ಥಿನಿಯರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು.