ಜೆಎಸ್‌ಎಸ್ ಎಎಚ್ಇಆರ್‌ ಜೀವ ವಿಜ್ಞಾನ ವಿಭಾಗದಿಂದ ಆಹಾರ ಭದ್ರತಾ ದಿನಾಚರಣೆ

Spread the love

ಮೈಸೂರು: ಮೈಸೂರಿನ ಜೆ ಎಸ್‌ಎಸ್ ಎಎಚ್ಇಆರ್‌ನ ಜೀವ ವಿಜ್ಞಾನ ವಿಭಾಗದ ಆಹಾರ ಮತ್ತು ಆಹಾರಶಾಸ್ತ್ರದ ವಿಭಾಗವು
ಮಂಗಳವಾರ ಜಾಗತಿಕ ಆಹಾರ ಭದ್ರತಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿತು.

ಸರಸ್ವತೀಪುರಂ ನಲ್ಲಿರುವ‌ ಜೆ ಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ‌ ಆಹಾರ ಭದ್ರತೆ ಕ್ರಿಯೆಯಲ್ಲಿ ವಿಜ್ಞಾನ ಎಂಬ ವಿಷಯದೊಂದಿಗೆ ಜಾಗತಿಕ ಆಹಾರ ಭದ್ರತಾ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಜೀವ ವಿಜ್ಞಾನಗಳ ಡೀನ್ ಪ್ರೊ. ರವೀಷ ಕೆ ಎ ಅವರು ಉದ್ಘಾಟಿಸಿದರು.

ಕೌಮಾರದಲ್ಲಿನ ಆಹಾರ ಭದ್ರತೆ ಮತ್ತು ಸ್ತ್ರೀಯರ ಆರೋಗ್ಯದ ಮೇಲೆ ಎಂಡೋಕ್ರೈನ್ ಡಿಸ್ರಪ್ಟರ್‌ಗಳ ಪರಿಣಾಮಗಳ ಬಗ್ಗೆ ವಿವರಿಸಿದರು.

ವಿಭಾಗದ ಅಧ್ಯಾಪಕರಾದ ಡಾ. ಅನೀಸ್ ಫಾತಿಮಾ, ಡಾ. ವನಿತಾ ರೆಡ್ಡಿ, ಡಾ. ಸೈದಾ ಫರ್ಹಾ ಮತ್ತು ಡಾ. ನವ್ಯಾ ರಾಜ್ ಎಂ ಪಿ ಅವರು ಆಹಾರದ ಲೇಬಲ್‌ಗಳು ಅಡಗಿರುವ ಅಂಶಗಳು ಹಾಗೂ ಸುರಕ್ಷಿತ ಆಹಾರ ಅಭ್ಯಾಸಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಶ್ನೋತ್ತರ ಸ್ಪರ್ಧೆ, ಪಿಕ್ ಅಂಡ್ ಸ್ಪೀಕ್, ಹಾಗೂ ಆಹಾರ ಕಲಬೆರಕೆ, ಲೇಬಲಿಂಗ್, ಸ್ವಚ್ಛತೆ ಮತ್ತು ಆಹಾರ ಆಯ್ಕೆಗಳ ಕುರಿತು ನೈಜ ಪ್ರದರ್ಶನಗಳು ಏರ್ಪಡಿಸಲಾಗಿತ್ತು.