ಮೈಸೂರು: ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಪ್ರಾಯೋಗಿಕ ಪ್ರಾಥಮಿಕ ಶಾಲೆಯ 2024 – 2025 ನೇ ಸಾಲಿನ ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳೊಂದಿಗೆ ಶಿಕ್ಷಕರು ಸಂಭ್ರಮಿಸಿದರು.
ಸಹ ಶಿಕ್ಷಕಿ ರಂಜಿತಾ ಅವರು ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭಿಸುತ್ತಿದ್ದಂತೆ ಮಕ್ಕಳು ಮತ್ತು ಸಹ ಶಿಕ್ಷಕಿಯರು ಸಾಮೂಹಿಕ ನೃತ್ಯ ಮಾಡುವುದರ ಮೂಲಕ ಎಲ್ಲರ ಮನರಂಜಿಸಿದರು.

ಕುಮಾರಿ ಆದ್ಯ ವಿಘ್ನ ವಿನಾಶಕ ಗಣಪತಿ ಪ್ರಾರ್ಥನೆ ಮಾಡುತ್ತಿದ್ದಂತೆ ಕಾರ್ಯಕ್ರಮ ಪ್ರಾರಂಭವಾಯಿತು.
ಶ್ರೀಕಂಠ ಸ್ವಾಮಿ ಕ್ಷೇತ್ರದ ಸಂಪನ್ಮೂಲ ಅಧಿಕಾರಿ ಮೂಗೆಶಪ್ಪ,ಜಾನಪದ ಕಲಾವಿದ
ಅರಸೀಕೆರೆ ಯೋಗಾನಂದ ಕಾರ್ಯಕ್ರಮ ಉದ್ಘಾಟಿಸಿದರು.
ನಿರೂಪಣೆಯನ್ನು ಸಹ ಶಿಕ್ಷಕಿ ಶಿಲ್ಪ ಆರ್ಯಂ ಮಾಡಿದರೆ, ರಾಜೇಶ್ವರಿ ಎಲ್ಲರನ್ನು ಸ್ವಾಗತಿಸಿದರು. ಶಾಲಾ ವಾರ್ಷಿಕ ವರದಿಯನ್ನು ಗಂಗಾ ಹೆಚ್ ಎಮ್ ಓದಿದರು.
ಕ್ರೀಡೆಯಲ್ಲಿ ವಿಜೇತರಾದ ಮಕ್ಕಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಸೌಮ್ಯ ಸಾಹಸಿಕೀರ್ ವಂದನಾರ್ಪಣೆ ಮಾಡಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಗುರುಸ್ವಾಮಿ ಎಂ ಮತ್ತು ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.