ಮೈಸೂರು,ಮಾ.6: ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಮೂಲ ಸಿದ್ದಾಂತಕ್ಕೆ ಎಂದಾದರೂ ಧಕ್ಕೆಯಾದಾಗ ಯುವ ಕಾಂಗ್ರೆಸ್ ಪದಾಧಿಕಾರಿಗಳು ಸಿಡಿದೇಳಬೇಕು ಎಂದು
ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ ಬಿ ಜೆ ವಿಜಯ್ ಕುಮಾರ್ ಕರೆ ನೀಡಿದರು.
ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಜಯಗಳಿಸಿದ ಜಿಲ್ಲಾ, ತಾಲೂಕು ಹಾಗೂ ವಿಧಾನಸಭಾ ಪದಾಧಿಕಾರಿಗಳ ಪ್ರಥಮ ಸಭೆ, ಪ್ರತಿಜ್ಞಾವಿಧಿ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಕಚೇರಿ ನಮಗೆ ದೇಗುಲ, ಗೆದ್ದ ಪ್ರತಿಯೊಬ್ಬ ಪದಾಧಿಕಾರಿಯೂ ಮೊದಲು ಕಾಂಗ್ರೆಸ್ ಕಚೇರಿಗೆ ಭೇಟಿಕೊಟ್ಟು ನಂತರ ಇತರೆ ಕಾರ್ಯಗಳಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಮಟ್ಟದಲ್ಲಿ ಒಂದು ದೊಡ್ಡ ಕಾರ್ಯಕ್ರಮವನ್ನು ಏರ್ಪಡಿಸಿ ಸಾಧ್ಯವಾದರೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಅಭಿನಂದನಾ ಸಮಾರಂಭ ನಡೆಸೋಣ ಎಂದು ತಿಳಿಸಿದರು.
ತಮ್ಮ ತಮ್ಮಲ್ಲಿ ಯಾವುದಾದರೂ ಭಿನ್ನಾಭಿಪ್ರಾಯಗಳು ಇದ್ದರೆ ಅದನ್ನು ಬಿಟ್ಟು ಪಕ್ಷ ಸಂಘಟನೆಯತ್ತ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ ಸಿಗುತ್ತದೆ, ಪಕ್ಷದಲ್ಲಿ ಸದರಿಸಾಲಿನಲ್ಲಿ ನಿಂತು ಕೆಲಸ ಮಾಡುವ ಮನೋಭಿಲಾಷೆ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಯಾವುದೇ ಘಟಕದಲ್ಲಿ ಗೆದ್ದರೂ ಸಹ ಮೊದಲು ಕಾರ್ಯಚಟುವಟಿಕೆ ಆರಂಭವಾಗುವುದೇ ಪಕ್ಷದ ಕಚೇರಿಯಿಂದ, ಪಕ್ಷದ ಶಿಷ್ಟಾಚಾರ ಯಾರು ಮರೆಯಬಾರದು ಎಂಬ ತಿಳುವಳಿಕೆ ನೀಡಿದರು.
ರಾಷ್ಟ್ರೀಯ ವಿಕೋಪ, ಶಿಕ್ಷಣಕ್ಕೆ ಸಂಭದಿಸಿದ ವಿಚಾರಗಳು, ಸಂವಿಧಾನ ಬದ್ದ ಕೆಲಸಗಳು ಯುವ ಕಾಂಗ್ರೆಸ್ ಮೂಲ ಐಡಿಯಲಾಜಿ ಎಂದು ಹೇಳಿದರು. ಎಲ್ಲಾ ಪ್ರತಿಭಟನೆ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ವಿಜಯಕುಮಾರ್ ಸೂಚಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಯುವ ಕಾಂಗ್ರೆಸ್ ಪದಾಧಿಕಾರಿಗಳ ಕಾರ್ಯಾಗಾರ ಮಾಡುವ ಅಲೋಚನೆ ಇದೆ ಎಂಬ ಮಾಹಿತಿ ನೀಡಿದರು.
ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್ ಮೂರ್ತಿ ಮಾತನಾಡಿ,ದೇಶದಲ್ಲಿ ಬಿಜೆಪಿ ಸೃಷ್ಟಿ ಮಾಡುತ್ತಿರುವ ಕೋಮುಗಲಭೆ ಹಾಗೂ ಹಸಿ ಹಸಿ ಸುಳ್ಳುಗಳಿಂದ ದೇಶ ಭಾರಿ ಹಿನ್ನಡೆಯನ್ನು ಅನುಭವಿಸುತ್ತಿದೆ, ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ರಾಜಕೀಯ ಲೇಪನ ಮಾಡಿ ದೇಶದ ಜನತೆಗೆ ಭೋಗಸ್ ಸುದ್ದಿಗಳನ್ನು ಬಿತ್ತರಿಸುತ್ತಿದ್ದಾರೆ,
ಇದರ ವಿರುದ್ಧದ ಹೋರಾಟ ಮಾಡುವುದು ಯುವ ಕಾಂಗ್ರೆಸ್ ಪದಾಧಿಕಾರಿಗಳ ಜವಾಬ್ದಾರಿ ಎಂದು ತಿಳಿಸಿದರು.
ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮಾತನಾಡಿ, ಮೈಸೂರಿನ ಉದಯಗಿರಿ ಗಲಾಟೆಯನ್ನ ಬಿಜೆಪಿ ತನ್ನ ಸ್ವಾರ್ಥ ಸಾಧನೆಗೆ ಬಳಸಿಕೊಂಡಿದೆ. ದೇಶದಲ್ಲಿ ಬಿಜೆಪಿಯನ್ನು ಬುಡ ಸಮೇತ ಕಿತ್ತೊಗೆಯುವ ತನಕ ಯುವ ಕಾಂಗ್ರೆಸ್ ಪದಾಧಿಕಾರಿಗಳು ವಿಶ್ರಾಂತಿ ಬಯಸಬಾರದು ಎಂದು ಹೇಳಿದರು.
ಸಭೆಯಲ್ಲಿ ಉಪಾಧ್ಯಕ್ಷ ಹೆಡತಲೆ ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಗುಡ್ಡಪ್ಪ ಎಂ ಶಿವಣ್ಣ, ಎಂ. ಶಿವಪ್ರಸಾದ್, ಈಶ್ವರ್ ಚಕ್ಕಡಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದನ್ ಕುಮಾರ್, ನಗರ ಅಧ್ಯಕ್ಷ ಅಬ್ರಾರ್, ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ದೀಪಕ್ ಶಿವಣ್ಣ, ನಜ್ಮಾನ್ ನಜೀರ್, ಅಬ್ರಾರ್ ಅಹಮದ್, ಜಿಲ್ಲಾ ಸೇವಾದಳದ ಅಧ್ಯಕ್ಷ ಸಾ.ಮಾ ಯೋಗೇಶ್, ಎಸ್.ಸಿ ಘಟಕದ ನಗರ ಅಧ್ಯಕ್ಷ ರಮೇಶ್, ಒಬಿಸಿ ನಗರ ಅಧ್ಯಕ್ಷ ಎನ್ ಆರ್ ನಾಗೇಶ್, ನಗರ ಸೇವಾದಳದ ಅಧ್ಯಕ್ಷ ಎಂ ಕೆ ಅಶೋಕ್ ಹಾಜರಿದ್ದರು.