ಮೈಸೂರು: ಜಮೀನಿಗೆ ರಸ್ತೆ ಬಿಡಿಸುವ ವಿಚಾರಕ್ಕೆ ಜಗಳ ನಡೆದು ಮೂರು ಮಂದಿಯ ಮೇಲೆ ಚಾಕು ಹಾಗೂ ರಾಡ್ ನಿಂದ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನಲ್ಲಿ ನಡೆದಿದೆ.

ಮೂವರಿಗೆ ಚಾಕುವಿನಿಂದ ಇರಿದು ರಾಡ್ ನಿಂದ ಹಲ್ಲೆ ಮಾಡಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.
ಈ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಕಟ್ಟೆಮನುಗನ ಹಳ್ಳಿಯಲ್ಲಿ ನಡೆದಿದ್ದು, ಜಮೀನು ಮಾಲೀಕ ಬಸವರಾಜು, ಪ್ರದೀಪ್ ಅವರಿಗೆ ಗಂಭೀರ ಗಾಯವಾಗಿದೆ.
ಕೋರ್ಟ್ ವ್ಯಾಜ್ಯವಿದ್ದರೂ ಜಮೀನಿಗೆ ನುಗ್ಗಿ ದಾಂಧಲೆ ಮಾಡಿದ್ದಾರೆ.
ಘಟನೆ ಸಂಬಂಧ ಸಣ್ಣಕುಮಾರ, ಬುದ್ದ, ಸೋಮೇಶ್, ಸಂಜು, ರವಿ,ಕುಮಾರ್, ಮುನಿಯಮ್ಮ, ದೊಡ್ಡಸಿದ್ದು, ರಾಜಶೇಖರ್, ಕವಿತಾ ವಿರುದ್ಧ ಪ್ರಕರಣ ದಾಖಲಾಗಿದೆ.