ಬುದ್ಧ ಪೂರ್ಣಿಮಾ: ಗೌತಮ ಬುದ್ಧ ಸ್ಮರಣೆ

Spread the love

ಮೈಸೂರು: ಜಗತ್ತಿಗೆ ಕರುಣೆ ಮತ್ತು ಶಾಂತಿಯನ್ನು ಸಾರಿದ, ಬೌದ್ಧ ಧರ್ಮದ ಸಂಸ್ಥಾಪಕ ಗೌತಮ ಬುದ್ಧರ ಜನ್ಮದಿನ ಪ್ರಯುಕ್ತ ಪುಷ್ಪ ನಮನ ಸಲ್ಲಿಸಲಾಯಿತು.

ಇದೇ ವೇಳೆ ವೈಶಾಖ ಮಾಸದ ಬುದ್ಧ ಪೂರ್ಣಿಮಾ ದಿನದ ಅಂಗವಾಗಿ ಗೌತಮ ಬುದ್ಧರನ್ನು ಭಕ್ತಿ ಪೂರ್ವಕವಾಗಿ ಸ್ಮರಿಸಿ ಪೂಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್, ಪರಿಶಿಷ್ಟ ವಿಭಾಗದ ಕಾರ್ಯದರ್ಶಿ ಗಾಂಧಿನಗರದ ಪ್ರಕಾಶ್, ಉದ್ಯಮಿ ಪ್ಲೆ ವುಡ್ ಮಹದೇವ್,ಕಿರಣ್ ಕುಮಾರ್, ಮಂಜುನಾಥ್, ಯೋಗೇಂದ್ರ ಹಾಗೂ ಗಾಂಧಿ ನಗರದ ಮುಖಂಡರು ಪಾಲ್ಗೊಂಡಿದ್ದರು.