ಗಾಂಜಾ ಮಾರಾಟ: ಪೊಲೀಸರ ದಾಳಿ-6 ಕೆಜಿ ಒಣ ಗಾಂಜಾ ಗೂಡ್ಸ್ ಆಟೋ ವಶ

Spread the love

ಮೈಸೂರು,ಏ.3: ಮೈಸೂರಿನ ಸೆನ್ ಕ್ರೈಂ ಹಾಗೂ ಕೆ ಆರ್ ನಗರ ಠಾಣೆ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿ, 6 ಕೆಜಿ ಒಣ ಗಾಂಜಾ ಮತ್ತು ಗೂಡ್ಸ್ ಆಟೋ ವಶಪಡಿಸಿಕೊಂಡಿದ್ದಾರೆ.

ಮೈಸೂರು ಜಿಲ್ಲೆ ಕೆ ಆರ್ ನಗರ ತಾಲೂಕಿನ ಮುಸ್ಲಿಂ ಬ್ಲಾಕ್ ವಾರ್ಡ್ 20 ರಲ್ಲಿ ಮೈಸೂರಿನ ಸೆನ್ ಕ್ರೈಂ ಠಾಣೆಯ ಡಿವೈಎಸ್ಪಿ ಎನ್.ರಘು ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ದಾಳಿ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಪರಾರಿಯಾಗಿಬಿಟ್ಟಿದ್ದಾನೆ.ಆದರೆ ಸ್ಥಳದಲ್ಲಿ ಸಿಕ್ಕಿದ 6 ಕೆಜಿ ಒಣ ಗಾಂಜಾ ಮತ್ತು ಗೂಡ್ಸ್ ಆಟೋ ಮತ್ತಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಕೆ ಆರ್ ನಗರ ಠಾಣೆ ಇನ್ಸ್ಪೆಕ್ಟರ್ ಶಿವಪ್ರಕಾಶ್, ಪೊಲೀಸ್ ಸಿಬ್ಬಂದಿ ಪರಶುರಾಮ ಗೌಡ, ಸೆನ್ ಠಾಣೆಯ ಪಿಎಸ್ಐ ಸುರೇಶ್ ಬೋಪಣ್ಣ, ಮೋಹನ್, ಮಹೇಶ್‌ಕುಮಾರ್, ಅಭಿಷೇಕ್, ಮಹೇಶ್, ಪಾಲ್ಗೊಂಡಿದ್ದರು.

ಕೆ ಆರ್ ನಗರ ಪೊಲೀಸರು ಪ್ರಕರಣ ದಾಖಲಾಗಿಸಿದ್ದಾರೆ.