ಮೈಸೂರು: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಜಗಳವಾಗಿ ಒಬ್ಬನ ಹತ್ಯೆಯಾಗಿರುವ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಘಟನೆ ಬೀಡಿ ಕಾಲೋನಿಯಲ್ಲಿ ನಡೆದಿದ್ದು,ಮುದಾಸಿರ್ ಪಾಷಾ(38)ಕೊಲೆಯಾದ ದುರ್ದೈವಿ,ರಿಜ್ವಾನ್ ಕೊಲೆ ಮಾಡಿದ ಸ್ನೇಹಿತ.
ಈ ಇಬ್ಬರು ಸ್ನೇಹಿತರು ಕೂಲಿ ಕೆಲಸ ಮಾಡಿ ಕೆಸಿಬಿ ಸಮುದಾಯದ ಭವನದ ಬಳಿ ಮಲಗಿದ್ದರು. ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿ ವಿಕೋಪಕ್ಕೆ ತಿರುಗಿದೆ.
ಈ ವೇಳೆ ಸಿಮೆಂಟ್ ಇಟ್ಟಿಗೆಯಿಂದ ರಿಜ್ವಾನ್ ಮುದಾಸಿರ್ ಪಾಷಾ ತಲೆಗೆ ಹೊಡೆದಿದ್ದಾನೆ.ಇದರಿಂದ ಮುದಾಸಿರ್ ಪಾಷಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಆರೋಪಿ ರಿಜ್ವಾನ್ ನನ್ನು ಉದಯಗಿರಿ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.