ಮೈಸೂರು: ದಸರಾ ವಸ್ತುಪ್ರದರ್ಶನದ ಮಹಿಳಾ ಮತ್ತು ಮಕ್ಕಳ ಉಪಸಮಿತಿಯ ವತಿಯಿಂದ ಮಹಿಳೆಯರು ಮತ್ತು ಮಕ್ಕಳಿಗಾಗಿ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ನಾಳೆ ಮಧ್ಯಾಹ್ನ 2-00 ಗಂಟೆಯಿಂದ 18 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಹಾಗೂ ದೇಸಿ ಆಟಗಳನ್ನು ಪ್ರಾಧಿಕಾರದ ಆವರಣದಲ್ಲಿನ ಪಿ.ಕಾಳಿಂಗರಾವ್ ಗಾನಮಂಟಪದಲ್ಲಿ ಏರ್ಪಡಿಸಲಾಗಿದೆ.
ಕಣ್ಣಿಗೆ ಬಟ್ಟೆ ಕಟ್ಟಿ ಬಕೆಟ್ ಹೊಡೆಯುವುದು,
ಅಳಿಗುಳಿ ಮನೆ ಆಟ,
ಸೂಜಿಗೆ ದಾರ ಪೋಣಿಸುವುದು,ಚೌಕಾಬಾರ
ಚಮಚದಲ್ಲಿ ನಿಂಬೆಹಣ್ಣನ್ನು ಇಟ್ಟುಕೊಂಡು ಓಡುವುದು,ಘಟ್ಟಮನೆ ಗ್ಲಾಸ್‌ನಲ್ಲಿ ಪಿರಾಮಿಡ್ ಜೋಡಿಸುವುದು,ಆಣೆ ಕಲ್ಲು,
ಗುಂಡು ಎಸೆತ,ಕೆರೆದಡ ಆಟ ಮತ್ತಿತರ ಸ್ಪರ್ಧೆ ಏರ್ಪಡಿಸಲಾಗಿದೆ.
ಆಸಕ್ತರು ಹೆಸರನ್ನು ನೊಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ
9611600103 ಸಂಪರ್ಕಿಸುವಂತೆ ಸಮಿತಿಯ ಅಧ್ಯಕ್ಷರು ಕೋರಿದ್ದಾರೆ.