ಮೈಸೂರು: ದಸರಾ ಸಂದರ್ಭದಲ್ಲಿ ದೀಪಾಲಂಕಾರ ನೋಡಲು ಮೈಸೂರಿನ
ದೇವರಾಜ ಅರಸು ರಸ್ತೆಗೆ ಬಂದರೆ ಯಾಕಪ್ಪಾ ಬಂದೆವು ಎನ್ನುವಂತಾಗಿಬಿಟ್ಟಿದೆ.
ಮೈಸೂರು ನಗರದ ಪ್ರಮುಖ ರಸ್ತೆ ಡಿ ದೇವರಾಜ ಅರಸು ರಸ್ತೆ. ಸಾವಿರಾರು
ವಾಹನ ಸವಾರರು ಹಾಗೂ ಪ್ರವಾಸಿಗರು ವಾಹನಗಳಲ್ಲಿ ಆಗಮಿಸುತ್ತಾರೆ,ಟ್ರಾಫಿಕ್ ಜಾಮ್ ಆಗುತ್ತದೆಂದು ಈ ರಸ್ತೆಯುದ್ದಕ್ಕೂ ನಡೆಯುತ್ತಾ ದೀಪಾಲಂಕಾರ ನೋಡಲು
ಕುಟುಂಬ ಸಮೇತ ಬರುತ್ತಾರೆ.
ಆದರೆ ಈ ದಸರಾ ಸಂದರ್ಭದಲ್ಲಿ ಅರಸು ರಸ್ತೆಯ ಕೆಲವು ಅಂಗಡಿ ಮಾಲೀಕರು ನವೀಕರಣ ನೆಪದಲ್ಲಿ ಪಾದಾಚಾರಿ
ಮಾರ್ಗವನ್ನು ಆಕ್ರಮಿಸಿಕೊಂಡಿದ್ದಾರೆ.
ಇದರಿಂದ ವಾಹನ ಸವಾರರಿಗೆ ಹಾಗೂ ಪಾದ ಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ.ಕೆಲವು ಅಂಗಡಿಗಳವರು ನಾಲ್ಕು ತಿಂಗಳಿಂದ ಕೆಲಸ ಮಾಡಿಸುತ್ತಲೇ ಇದ್ದಾರೆ ಇದು ಎಷ್ಟು ಸರಿ?
ಕೆಲವರು ಅಂಗಡಿ ಮುಂದೆ ಹಾಕಿರುವ ಬೊಂಬುಗಳ ಸಂದಿಯಲ್ಲಿ ನುಗ್ಗಿ ಓಡಾಡುವಂತಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಬೊಂಬುಗಳನ್ನು ತೆರವು ಗೊಳಿಸಿ ಪಾದಾಚಾರಿಗಳಿಗೆ ಮುಕ್ತವಾಗಿ ಓಡಾಡಲು ಅವಕಾಶ ಕಲ್ಪಿಸಿ ಕೊಡಬೇಕೆಂದು ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್ ಆಗ್ರಹಿಸಿದ್ದಾರೆ.
ಅವರು ಇಂದು ದೇವರಾಜ ಅರಸು ರಸ್ತೆಯಲ್ಲಾಗುತ್ತಿರುವ ಫಜೀತಿಯನ್ನು ನೋಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರವಿ, ಬಾಬು, ನಿತಿನ್, ವಿನೋದ್, ಉಮೇಶ್, ಎಸ್ ಎನ್ ರಾಜೇಶ್, ರಾಕೇಶ್, ಹರೀಶ್ ಮತ್ತಿತರರು ಹಾಜರಿದ್ದರು.