ಬೋರ್ಡಿಂಗ್ ಬಾಯ್ಸ್ ಗೆ ನೋಟ್ ಬುಕ್, ಹಣ್ಣು ವಿತರಿಸಿ ವಿಶ್ವ ಸ್ನೇಹಿತರ ದಿನಾಚರಣೆ

Spread the love

ಮೈಸೂರು: ನಗರದ ಎಂ.ಜಿ.ರಸ್ತೆಯಲ್ಲಿರುವ ಸಿ.ಎಸ್.ಐ. ಬಾಯ್ಸ್ ಬೋರ್ಡಿಂಗ್ ಹೋಮ್ ವಿದ್ಯಾರ್ಥಿಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ನೋಟ್ ಬುಕ್, ಹಣ್ಣು ಹಂಪಲು ವಿತರಿಸಿ ವಿಶ್ವ ಸ್ನೇಹಿತರ ದಿನ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್ ಅವರು,
ನಮ್ಮ ಭಾರತ ದೇಶದ ಕೃಷ್ಣ ಸುಧಾಮ, ಅಮರ್- ಅಕ್ಬರ್- ಅಂತೋಣಿ ಕಾಲದ ಇತಿಹಾಸದಿಂದ ಪ್ರಜಾಪ್ರಭುತ್ವದವರೆಗೂ ಸ್ನೇಹ-ಭಾಂದವ್ಯ ಮೌಲ್ಯಯುತವಾಗಿದ್ದು ಎಂದು ಹೇಳಿದರು.

ಯಾವುದೇ ಸಾಧನೆ ಮಾಡಲು ಮತ್ತು ಯೋಜನೆ ಯಶಸ್ವಿಯಾಗ ಬೇಕಾದರೆ ಸ್ನೇಹಿತರ ಸಹಕಾರ ಬಹುಮುಖ್ಯ, ಹಾಗಾಗಿ ಸ್ನೇಹಕ್ಕೆ ಯಾವುದೇ ಜಾತಿ ಧರ್ಮ ವಯಸ್ಸಿನ ಭೇದಭಾವ ಇಲ್ಲ, ಸಮಾಜದಲ್ಲಿ ಸ್ನೇಹ ಸಂಪಾದನೆಯೇ ಶಾಶ್ವತವಾದ ಸಾಧನೆ ಎಂದು ನುಡಿದರು.

ಈ ಸಂದರ್ಭದಲ್ಲಿ ಲಕ್ಷ್ಮಿಪುರಂ ಪೊಲೀಸ್ ಠಾಣೆಯ ದಯಾನಂದ್, ಬೋರ್ಡಿಂಗ್ ಹೋಮ್ ನ ದೇವರತ್ನ,ಗಾಯಕ ಯಶವಂತ್ ಕುಮಾರ್, ಹಿರಿಯ ಕ್ರೀಡಾಪಟು ಮಹದೇವ್, ವೀರಭದ್ರ ಸ್ವಾಮಿ , ಶ್ರೀಧರ್,ಮಹೇಶ್,ರಾಜೇಶ್ ಕುಮಾರ್,ಎಸ್ ಪಿ ಅಕ್ಷಯ್ ಪ್ರಿಯದರ್ಶನ್, ಹರ್ಷಿತ್ ಎಸ್ ನಾಗೇಶ್, ನಿರೀಕ್ಷಿತ್ ಮತ್ತಿತರರು ಹಾಜರಿದ್ದರು.