ಮೈಸೂರು: ಮಹಾನಗರ ಪಾಲಿಕೆಯ ಅಧಿಕಾರಿಗಳ ತಂಡ ನಗರದ ಸಂತೆ ಪೇಟೆಯಲ್ಲಿ ದಿಢೀರ್ ದಾಳಿ ಮಾಡಿ ನಿಷೇಧಿತ ಪ್ಲಾಸ್ಟಿಕ್ ಸೀಸ್ ಮಾಡಿದರು.
ಸಂತೆಪೇಟೆಯ ಟ್ರೇಡಿಂಗ್ಸ್ ಘಟಕದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 618 ಕೆಜಿಗೂ ಹೆಚ್ಚು ಪ್ರಮಾಣದ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು ರೂ 25,000 ರೂ ದಂಡ ವಿಧಿಸಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಪರಿಸರ ಅಭಿಯಂತರಾದ ಮೈತ್ರಿ, ಹೆಲ್ತ್ ಇನ್ಸ್ಪೆಕ್ಟರ್ ಕೃಷ್ಣ, ಬಸವರಾಜು, ಮಂಜು ಕುಮಾರ್, ಅಭಯ ತಂಡದವರು ಹಾಜರಿದ್ದರು.