(ವರದಿ:ಸಿದ್ದರಾಜು,ಕೊಳ್ಳೇಗಾಲ)
ಮಲೆ ಮಹದೇಶ್ವರ ಬೆಟ್ಟ: ಕಲ್ಬುರ್ಗಿ ವಿಭಾಗದ ಕ್ಯಾಬಿನೆಟ್ ಸಭೆ ಬಳಿಕ ಮೈಸೂರು ವಿಭಾಗದ ಸಂಪುಟ ಸಭೆ ನಡೆಸಿದ್ದೇವೆ. ಇದೇ ರೀತಿ ಬೆಳಗಾವಿ,ಬಿಜಾಪುರದಲ್ಲಿ, ಬೆಂಗಳೂರು ವಿಭಾಗದ ಸಭೆ ನಂದಿ ಬೆಟ್ಟದಲ್ಲಿ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ ವಿವರಿಸಿದರು.
3647 ಕೋಟಿ 42 ಲಕ್ಷ ಮೌಲ್ಯದ ಕಾಮಗಾರಿಗೆ ಕ್ಯಾಬಿನೆಟ್ ಅಂಗೀಕಾರ ಮಾಡಲಾಗಿದೆ, ಪಿಡಬ್ಲ್ಯುಡಿ,ಬೃಹತ್-ಸಣ್ಣ ನೀರಾವರಿ ಇಲಾಖೆ, ಇಂಧನ ಇಲಾಖೆ, ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ, ಬುಡಕಟ್ಟು ಅಭಿವಧ್ಧಿ, ಟ್ರೈಬಲ್ ಹಳ್ಳಿಗಳಿಗೆ ರಸ್ತೆ ಮಾಡಲು ಹಣ ವೆಚ್ಚ ಮಾಡಲಾಗುವುದು ಎಂದು ತಿಳಿಸಿದರು

1787 ಕೋಟಿ ನೀರಾವರಿ,ಎಸ್ ಸಿ,ಎಸ್ ಟಿ ಜನರ ವಸತಿ, ಕೇರಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದು ಹೇಳಿದರು
ಮಾನವ-ಪ್ರಾಣಿ ಸಂಘರ್ಷ ತಡೆಯಲು 210 ಕೋಟಿ ವೆಚ್ಚದಲ್ಲಿ ರೈಲ್ವೇ ಬ್ಯಾರಿಕೇಡ್ ಪೂರ್ಣಗೊಳಿಸಲಾಗುವುದು ಹಾಗೂ
ಕುಡಿಯುವ ನೀರಿಗಾಗಿ 315 ಕೋಟಿ, ಆರೋಗ್ಯ ಸುಧಾರಣೆಗೆ 228 ಕೋಟಿ, ಕೊಳ್ಳೇಗಾಲದಲ್ಲಿ 250 ಬೆಡ್ ಗಳ
ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಸಂಪುಟ ಅಂಗೀಕಾರ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು.

ಪ್ರವಾಸೋದ್ಯಮ ಇಲಾಖೆಗೆ 300 ಕೋಟಿ,
ಹನೂರಿನಲ್ಲಿ ಹೊಸ ತಾಲ್ಲೂಕಿಗೆ ತಾಲ್ಲೂಕು ಆಸ್ಪತ್ರೆ, ತಾಲ್ಲೂಕಾ ಭವನ ನಿರ್ಮಾಣ ಮಾಡಲಾಗುವುದು,ಚಿಕ್ಕಲ್ಲೂರಿನಲ್ಲಿ ರಾಜಪ್ಪಾಜಿ, ಸಿದ್ದಪ್ಪಾಜಿ, ಮಂಟೇಸ್ವಾಮಿ ಅಭಿವೃದ್ಧಿ ಕೇಂದ್ರ ನಿರ್ಮಿಸಲು ಮತ್ತು
ವರುಣಾದ ಇಳಿಯಾಲದಲ್ಲಿ ಅಂತರಾಷ್ಟ್ರೀಯ ಕ್ರೀಡಾಂಗಣಕ್ಕೆ ಜಾಗ ಕೊಡಲು ಅಂಗೀಕಾರ ಕೈಗೊಳ್ಳಲಾಗಿದೆ
40 ಕೋಟಿ ಅಂದಾಜಿನಲ್ಲಿ ಬದನವಾಳು ಅಭಿವೃದ್ಧಿ,ಮೈಸೂರಿನ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ 101 ಕೋಟಿ ಮೊತ್ತದ ಜಾಗ ನೀಡಲು,ಮೈಸೂರಿನ ಅಟಾರಾ ಕಚೇರಿಯಲ್ಲಿ 100 ಕೋಟಿ ವೆಚ್ಚದ ಮ್ಯೂಸಿಯಂ ನಿರ್ಮಾಣಕ್ಕೆ ಒಪ್ಪಿಗೆ ಪಡೆಯಲಾಗಿದೆ

ಗುಂಡ್ಲುಪೇಟೆ 110 ಕೆರೆಗಳಿಗೆ ನೀರು ತುಂಬಿಸುವ 475 ಕೋಟಿ ವೆಚ್ಚದ ಯೋಜನೆ,ಚಾಮರಾಜನಗರದಲ್ಲಿ ಹೊಸ ಪ್ರವಾಸಿ ಮಂದಿರ ನಿರ್ಮಾಣ, ಚಾಮರಾಜನಗರ ಟೌನ್ ನಲ್ಲಿ ಕುಡಿಯುವ ನೀರು, ಒಳ ಚರಂಡಿ ನಿರ್ಮಾಣ,
ಚಾಮರಾಜನಗರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 15 ಕೋಟಿ,
ಒಟ್ಟಾರೆ 3647.62 ಕೋಟಿ ವೆಚ್ಚದಲ್ಲಿ ಮೈಸೂರು ವಿಭಾಗದಲ್ಲಿ ತುರ್ತು ಅಭಿವೃಧ್ಧಿ ಕಾರ್ಯಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
