ಮೈಸೂರು: ಮೈಸೂರು ಸ್ವಚ್ಛ ನಗರಿ,ಸಾಂಸ್ಕೃತಿಕ ನಗರಿ,ನಿರ್ಮಲ ಮೈಸೂರು ಎಂಬೆಲ್ಲ ಬಿರುದುಗಳು ಕೇವಲ ಪುಸ್ತಕದಲ್ಲಿ.ಈ ಬಗ್ಗೆ ನಗರಪಾಲಿಕೆ ಅಧಿಕಾರಿಗಳ ಕರ್ತವ್ಯ ನಿಷ್ಠೆ ಶೂನ್ಯ ಎಂದು
ಯುವ ಭಾರತ್ ಸಂಘಟನೆ
ಸಂಚಾಲಕ ಜೋಗಿಮಂಜು ಬೇಸರ ವ್ಯಕ್ತಪಡಿಸಿದ್ದಾರೆ.
ಮೈಸೂರು ನಗರಕ್ಕೆ ಬರುವ ಪ್ರವಾಸಿಗರಿಗೆ ನಗರದ ಯಾವುದೇ ಬಸ್ ನಿಲ್ದಾಣಗಳನ್ನು ನೋಡಿದರೂ ಅಧಿಕಾರಿಗಳ ಕೆಲಸ ಎದ್ದು ಕಾಣುತ್ತದೆ ಎಂದು ಹೇಳಿದ್ದಾರೆ.
ನಗರದ ಎಲ್ಲಾ ಗೋಡೆಗಳ ಮೇಲೆ ಹಾಗೂ ಸರ್ಕಾರದ ಬಸ್ ತಂಗು ನಿಲ್ದಾಣಗಳಲ್ಲಿ ಕೆಲವು ಖಾಸಗಿ ಕಾರ್ಯಕ್ರಮದ ವಿವರ,
ಪಿ.ಜಿ.ಬಾಡಿಗೆ,ಕೆಲಸಕ್ಕೆ ಬೇಕಾಗಿದ್ದಾರೆ,
ಹೋಟೆಲ್ ಗಳ ಮಾರ್ಕೆಟಿಂಗ್ ಹಾಗೂ ಕೆಲವು ಅಶ್ಲೀಲ ಭಿತ್ತಿ ಪತ್ರ ಅಂಟಿಸಿದ್ದಾರೆ.
ಹಾಗಾಗಿ ಬಸ್ ನಿಲ್ದಾಣಗಳಲ್ಲಿ ಕಾಯುವ ಜನಸಾಮಾನ್ಯರು ಮುಜುಗರ ಪಡುವ ಸ್ಥಿತಿ ಇದೆ ಎಂದು ಜೋಗಿ ಮಂಜು ತಿಳಿಸಿದ್ದಾರೆ.
ಲಕ್ಷಾಂತರ ರೂ ವೆಚ್ವ ಮಾಡಿ ಸಾರ್ವಜನಿಕ ರಿಗೆ ಅನುಕೂಲವಾಗಲೆಂದು ಮಾಡಿರುವ ನಿಲ್ದಾಣಗಳು ದುರ್ಬಳಕೆ ಯಾಗುತಿವೆ.
ವಾರ್ಡ್ ವ್ಯಾಪ್ತಿಯಲ್ಲಿ ಇರುವ ಆರೋಗ್ಯ ಅಧಿಕಾರಿಗಳು ಕೇವಲ ಟ್ರೇಡ್ ಲೈಸನ್ಸ್ ಗಾಗಿ ಸೀಮಿತ ವಾಗಿದ್ದು ಹೊರಗಡೆ ಬಿತ್ತಿ ಪತ್ರಗಳನ್ನು ಅಂಟಿಸುವವರ ವಿರುದ್ದ ಯಾವುದೇ ಕ್ರಮ ತೆಗೆದುಕೊಳ್ಳದೆ ಇದಕ್ಕೂ ನಗರಪಾಲಿಕೆಗೂ ಸಂಬಂಧ ವಿಲ್ಲವೇನೊ ಎಂಬಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂತಹ ಭಿತ್ತಿಪತ್ರ ಅಂಟಿಸುವವರ ವಿರುಧ್ಧ ದಂಡ ವಿಧಿಸಿ ಅವರ ಮೇಲೆ ಸರ್ಕಾರದ ಆಸ್ತಿ ದುರ್ಬಳಕೆ ಅಡಿ ಕ್ರಿಮಿನಲ್ ಕೇಸ್ ದಾಖಲು ಮಾಡಬೇಕೆಂದು ನಗರಪಾಲಿಕೆ ಆಯುಕ್ತರನ್ನು ಜೋಗಿಮಂಜು ಒತ್ತಾಯಿಸಿದ್ದಾರೆ.