ಮೈಸೂರು: ಆಕ್ಸಲ್ ತುಂಡಾಗಿ ರಸ್ತೆ ವಿಭಜಕಕ್ಕೆ ಶಾಲಾ ಬಸ್ ಡಿಕ್ಕಿ ಹೊಡೆದಿದ್ದು ಭಾರಿ ಅನಾಹುತ ತಪ್ಪಿದ ಘಟನೆ
ಮೈಸೂರು ಬೆಂಗಳೂರು ರಸ್ತೆಯಲ್ಲಿ ನಡೆದಿದೆ.
ವಿಜಯಪುರದಿಂದ ಪ್ರವಾಸ ಬಂದಿದ್ದ ಶಾಲಾ ಮಕ್ಕಳ ಬಸ್ ಢಿಕ್ಕಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.
ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಮೈಸೂರಿನಿಂದ ಬೆಂಗಳೂರಿಗೆ ತೆರಳುವ ವೇಳೆ ಈ ಅಪಘಾತ ನಡೆದಿದೆ.
ನರಸಿಂಹರಾಜ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.