ವಕ್ಸ್‌ ಕಾಯ್ದೆ ತಿದ್ದುಪಡಿ ದೇಶದ ಭದ್ರತೆ: ಹೇಮಾ ನಂದೀಶ್

Spread the love

ಮೈಸೂರು,ಏ.5: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಂದು ದೇಶ ಒಂದೇ ಕಾನೂನು ಎಂಬ ಸಂದೇಶ ನೀಡುತ್ತಿರುವುದು ಐತಿಹಾಸಿಕ ನಿರ್ಧಾರ ಎಂದು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾನಂದೀಶ್ ತಿಳಿಸಿದ್ದಾರೆ.

ವಕ್ಸ್‌ ಕಾಯ್ದೆ ತಿದ್ದುಪಡಿ ದೇಶದ ಭದ್ರತೆಗೆ ಅನುಕೂಲವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತ ದೇಶದಲ್ಲಿ ಜೈನರು, ಬೌದ್ಧರು, ಕ್ರಿಶ್ಚಿಯನ್ನರು ಸೇರಿದಂತೆ ಹಲವು ಅಲ್ಪಸಂಖ್ಯಾತರಿಗಿಲ್ಲದ ವಕ್ಸ್ ಬೋರ್ಡ್ ಮುಸ್ಲಿಂರಿಗ್ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.

ವಕ್ಸ್ ಬೋರ್ಡ್ ಕಾನೂನು ನೆರವಿನಿಂದ ಹಲವು ಮಠಮಾನ್ಯಗಳು, ಶಾಲಾ ಕಾಲೇಜುಗಳು, ಮತ್ತು ಸಾರ್ವಜನಿಕರ ಆಸ್ತಿ ಸೇರಿದಂತೆ 1.2 ಲಕ್ಷ ಕೋಟಿ ರೂ. ಆಸ್ತಿ ಕಬಳಿಸಿದ್ದು, ದೇಶದ ಸರಕಾರೇತರ ಅತೀ ಹೆಚ್ಚು ಆಸ್ತಿ ಹೊಂದಿದೆ ಎಂದು ಜೆಪಿಸಿ (ಜಂಟಿ ಸಂಸತ್ ಸಮಿತಿ) ವರದಿ ನೀಡಿದೆ.

ಅತೀ ಹೆಚ್ಚು ರೈತರ ಆಸ್ತಿಯೊಂದಿಗೆ ಮುಸ್ಲಿಂ ಸಮುದಾಯದ ಆಸ್ತಿ ಕೂಡ ಕಬಳಿಸಿದ್ದು ಬಹಿರಂಗವಾಗಿದೆ. ಹೊಸ ವಕ್ಸ್ ಕಾಯ್ದೆ ತಿದ್ದುಪಡಿಯಿಂದ ಯಾರಿಗಾದರೂ ಅನ್ಯಾಯವಾದರೆ ಜಿಲ್ಲಾಧಿಕಾರಿಗಳೊಂದಿಗೆ ಕೋರ್ಟ್ ಮೂಲಕ ನ್ಯಾಯ ಪಡೆಯಬಹುದು.

ವಕ್ಸ್ ಸಮಿತಿಯಲ್ಲಿ ಮಹಿಳೆಯರೂ, ಮುಸ್ಲಿಮೇತರರಿಗೂ ಅವಕಾಶ ನೀಡಿ ಪಾರದರ್ಶಕವಾಗಿ ನ್ಯಾಯ ಕೊಡಿಸಲು ವಕ್ಸ್‌ ಕಾಯ್ದೆ ತಿದ್ದುಪಡಿ ಅನುಕೂಲವಾಗಲಿದೆ ಎಂದು ಹೇಮಾ ನಂದೀಶ್ ತಿಳಿಸಿದ್ದಾರೆ.