ಮೈಸೂರು: ಡೇರಿಂಗ್ ಸ್ಟಾರ್ ಎಸ್ ಜಯಪ್ರಕಾಶ್ ( ಜೆ ಪಿ ) ನಟಿಸಿರುವ ಭಗೀರಥ ಚಲನಚಿತ್ರ ರಾಜ್ಯಾದ್ಯಂತ ಇದೇ ಶುಕ್ರವಾರ ಬಿಡುಗಡೆ ಆಗುತ್ತಿದ್ದು,ಇಂದು
ಪ್ರಚಾರಕ್ಕೆ ಚಾಲನೆ ನೀಡಲಾಯಿತು.
ಮೈಸೂರು ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಸಿನಿಮಾದ ಪ್ರಚಾರಕ್ಕೆ ಚಾಲನೆ ನೀಡಲಾಯಿತು.ಅಶ್ವದ ಮೇಲೆ ಭಗೀರಥ ಪೋಸ್ಟರ್ ಇಟ್ಟು ಚಾಲನೆ ನೀಡುತ್ತಿರುವುದು ವಿಶೇಷ.
ಭಗೀರಥದಲ್ಲಿ ಅಸಾಧ್ಯವಾದದನ್ನು ಸಾಧ್ಯವಾಗಿಸುವ ಕಥೆ ಇದೆ, ಈ ಸಿನಿಮಾದಲ್ಲಿ ಒಂದು ಸಾಮಾಜಿಕ ಸಂದೇಶವಿದೆ, ಯುವಕರಿಗೆ ಜೀವನದಲ್ಲಿ ಸಾಧಿಸಬೇಕಾದನ್ನು ಗುರಿಯಾಗಿಟ್ಟುಕೊಂಡು ಸಾಧಿಸಬೇಕೆಂಬ ಸಂದೇಶವಿದೆ. ಆದುದರಿಂದ ಪ್ರತಿಯೊಬ್ಬ ಕನ್ನಡಿಗರು, ವಿಧ್ಯಾರ್ಥಿ ದೆಸೆಯಿಂದ ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಹಿರಿಯ ಹೋರಾಟಗಾರರಾದ ಹಾಗೂ ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಎಸ್ ಜಯ ಪ್ರಕಾಶ್ ರವರ ಈ ಚಿತ್ರವನ್ನು ನೋಡಲೇಬೇಕು, ಕನ್ನಡ ಸಿನಿಮಾಗಳನ್ನು ನೋಡಿ ಕನ್ನಡ ಕಲಾವಿದರುಗಳನ್ನು ಬೆಳೆಸಬೇಕು ಎಂದು ಅಭಿಮಾನಿಗಳು ಈ ವೇಳೆ ಮನವಿ ಮಾಡಿದರು.
ಪ್ರಚಾರ ಕಾರ್ಯದಲ್ಲಿ ತೇಜೇಶ್ ಲೋಕೇಶ್ ಗೌಡ,ಸಿಂದುವಳ್ಳೀ ಶಿವಕುಮಾರ್, ವರಕೂಡು ಕೃಷ್ಣೇಗೌಡ, ನೇಹಾ, ಪ್ರಭುಶಂಕರ, ನಾಗರಾಜ್, ಪ್ರದೀಪ್ , ಮಂಜುಳಾ , ಶಿವಣ್ಣ , ರಘು ಅರಸ್, ಪುಷ್ಪಾವತಿ, ಹನುಮಂತೇಗೌಡ, ಪ್ರಭಾಕರ್, ಕೃಷ್ಣಪ್ಪ , ರವೀಶ್, ಮಹೇಶ್ ಒಂಟಿಕೊಪಲು, ಅಕ್ಬರ್ , ಅಶೋಕ್ ಹನುಮಂತಯ್ಯ ಮತ್ತಿತರರು ಪಾಲ್ಗೊಂಡಿದ್ದರು.
