ದಿ ಮರ್ಚೆಂಟ್ ಕೋ ಆಪರೇಟಿವ್ ಬ್ಯಾಂಕ್:ಆನಂದ್ ನೇತೃತ್ವದ ತಂಡಕ್ಕೆ ಗೆಲುವು

Spread the love

ಮೈಸೂರು: ಮೈಸೂರಿನ ದಿ ಮರ್ಚೆಂಟ್ ಕೋ ಆಪರೇಟಿವ್ ಬ್ಯಾಂಕ್ ನ 2025 – 2030ನೆ ಸಾಲಿನ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯ 12 ಸ್ಥಾನಗಳನ್ನು ಆರ್. ಆನಂದ್ ನೇತೃತ್ವದ ತಂಡ ಗೆದ್ದುಕೊಂಡಿದೆ.

ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆರ್. ಆನಂದ್ ಅವರು 2,690 ಮತಗಳನ್ನು ಗಳಿಸುವ ಮೂಲಕ ನಿರ್ದೇಶಕರಾಗಿ ಪುನರಾಯ್ಕೆ ಅಸಗಿದ್ದಾರೆ.

ಪ್ರಚಂಡ ಜಯಭೇರಿ ಬಾರಿಸಿದ ಆನಂದ್ ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದುಬಂದಿತು.

ಡಿ.ಎ.ವಿ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಮೈಸೂರು ಜಿಲ್ಲಾ ವಿಶ್ವಕರ್ಮ ಸಂಘದ ಅಧ್ಯಕ್ಷ ರಿಷಿ ವಿಶ್ವಕರ್ಮ, ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು,ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡರು,ಕೆ.ಎಂ.ಪಿ.ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್ ಮತ್ತಿತರರು ಆನಂದ್ ಅವರನ್ನು ಅಭಿನಂದಿಸಿದರು.