ಜಗಳ ಬಿಡಿಸಿದ್ದಕ್ಕೆ ವ್ಯಕ್ತಿ ಮೇಲೆ ನಾಲ್ವರಿಂದ ಹಲ್ಲೆ: ನಾಲ್ವರ ವಿರುದ್ದ ಎಫ್ಐಆರ್

Spread the love

ಮೈಸೂರು: ಜಗಳ ಬಿಡಿಸಿದ್ದಕ್ಕೆ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಕೆ.ಆರ್.ಆಸ್ಪತ್ರೆ ಆವರಣದಲ್ಲಿ ವ್ಯಕ್ತಿ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ನಡೆದಿದೆ.

ಸುರೇಶ್ ಹಲ್ಲೆಗೆ ಒಳಗಾಗಿದ್ದು‌ ಚಿಕಿತ್ಸೆ ಪಡೆದಿದ್ದಾರೆ.

ಘಟನೆಗೆ ಸಂಭಂಧಿಸಿದಂತೆ ದೇವರಾಜ ಪೊಲೀಸ್ ಠಾಣೆಯಲ್ಲಿ ಮಹದೇವಸ್ವಾಮಿ,ಸಾವಿತ್ರಿ,ಪುಟ್ಟಮ್ಮ,ರತ್ನಮ್ಮ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.

ಸುರೇಶ್ ಆಟೋ ಚಾಲಕರಾಗಿದ್ದು,ರವಿ ಎಂಬುವರ ಆಟೋ ಓಡಿಸುತ್ತಿದ್ದರು.

ರವಿ ಅವರ ವಿಜಯನಗರದ ಮನೆಯಲ್ಲಿ ಕೌಟುಂಬಿಕ ವಿಚಾರದಲ್ಲಿ ಗಲಾಟೆ ಆಗಿದೆ.ಪತ್ನಿ ನಾಗರತ್ನ ಎಂಬುವರ ಮೇಲೆ ಸಂಭಂಧಿಕರು ಹಲ್ಲೆ ನಡೆಸಿದ್ದಾರೆ.

ಈ ವೇಳೆ ಜಗಳ ಬಿಡಿಸಿ ಅರೆಪ್ರಜ್ಞಾವಸ್ತೆಯಲ್ಲಿದ್ದ ನಾಗರತ್ನ ರನ್ನ ಕೆ.ಆರ್.ಆಸ್ಪತ್ರೆಗೆ ಸುರೇಶ್ ಕರೆತಂದಿದ್ದಾರೆ.

ಅದೇ ಸಮಯದಲ್ಲಿ ಅಲ್ಲಿಗೆ ಬಂದ ರವಿ ಸಂಭಂಧಿಕರಾದ ಮಹದೇವಸ್ವಾಮಿ,ಸಾವಿತ್ರಿ,ಪುಟ್ಟಮ್ಮ ಹಾಗೂ ರತ್ನಮ್ಮ ಅವರು ನೀನು ಯಾರೋ ಜಗಳ ಬಿಡಿಸಲು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೆ.ಆರ್.ಆಸ್ಪತ್ರೆ ಆವರಣದಲ್ಲೇ ಹಲ್ಲೆ ನಡೆಸಿದ್ದಾರೆ.

ಸುರೇಶ್ ತಲೆಗೆ ಬಲವಾದ ವಸ್ತುವಿನಿಂದ ಹಲ್ಲೆ ನಡೆಸಿದ್ದಾರೆ.ಗಾಯಗೊಂಡ ಸುರೇಶ್ ಗೂ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಹಲ್ಲೆ ನಡೆಸಿದ ನಾಲ್ಕು ಮಂದಿ ವಿರುದ್ದ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.