ಮಂಡ್ಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ವಿಶ್ವವಿಖ್ಯಾತ ಕೆಆರ್‌ಎಸ್ ಡ್ಯಾಂ ದಾಖಲೆಯ ಮೈಲಿಗಲ್ಲುಗಳನ್ನು ತಲುಪಿದೆ.
ಇದೀಗ ಕೆಆರ್‌ಎಸ್ ಅಣೆಕಟ್ಟೆ ಮತ್ತೊಂದು ದಾಖಲೆಗೆ ಸಾಕ್ಷಿಯಾಗಿದೆ.ಕೆಆರ್‌ಎಸ್ ಅಣೆಕಟ್ಟೆ ಬರೋಬ್ಬರಿ 150 ದಿನಗಳ ಕಾಲ ಗರಿಷ್ಠ ಮಟ್ಟವನ್ನು ಕಾಯ್ದಿರಿಸಿಕೊಳ್ಳುವ ಮೂಲಕ ನೂತನ ದಾಖಲೆ ಬರೆದಿದೆ.
ಈ ಬಾರಿ ವರುಣನ ಕೃಪಾಕಟಾಕ್ಷದಿಂದ ಜೂನ್ ತಿಂಗಳಲ್ಲೇ ಕೆ ಆರ್ ಎಸ್ ದಾಖಲೆ ಬರೆದಿತ್ತು.
ಈಗ ಅಂತಹುದೇ ದಾಖಲೆಯನ್ನು ನಿರ್ಮಾಣ ಮಾಡಿದೆ.124.80 ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಅಣೆಕಟ್ಟೆ ಕಳೆದ 150 ದಿನಗಳಿಂದಲೂ ಅದೇ ಮಟ್ಟವನ್ನು ಕಾಯ್ದಿರಿಸಿಕೊಂಡಿರುವುದು ಈ ಬಾರಿಯ ವಿಶೇಷ.
