ಸಾಲ ಮರುಪಾವತಿಸದ ರೈತನ ಮನೆ ಜಪ್ತಿ ಮಾಡಿದ ಮೈಕ್ರೋ ಫೈನಾನ್ಸ್!

Spread the love

ಮೈಸೂರು: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಅಟ್ಟಹಾಸ ಮುಂದುವರಿಸಿದ್ದು, ಬಡ ಕುಟುಂಬವೊಂದು ಬೀದಿಗೆ ಬಂದ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ಸಾಲದ ಕಂತು ಕಟ್ಟಿಲ್ಲ ಎಂಬ ಕಾರಣಕ್ಕೆ ಮೈಕ್ರೋ ಫೈನಾನ್ಸ್ ನವರು ಮನೆ ಜಪ್ತಿ ಮಾಡಿದ್ದಾರೆ.

ನಂಜನಗೂಡು ತಾಲ್ಲೂಕಿನ ಕಂದೇಗಾಲ‌ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಕಾಲವಕಾಶ ಕೋರಿದ್ದರೂ ಸ್ಪಂದಿಸದ ಫೈನಾನ್ಸ್ ನ್ಯಾಯಾಲಯದಿಂದ ಆದೇಶ ತಂದು ಮನೆ ಜಪ್ತಿ ಮಾಡಿದೆ,ಹಾಗಾಗಿ ಸಾಲ ಪಡೆದ ಕುಟುಂಬ ಬೀದಿಗೆ ಬಿದ್ದಿದೆ.

ಚಿನ್ನಸ್ವಾಮಿ ಎಂಬುವರು ಮನೆ ನಿರ್ಮಾಣ ಸಂಭಂದ ಇಕ್ವೀಟಾಸ್ ಸ್ಮಾಲ್ ಫೈನಾನ್ಸ್ ನಲ್ಲಿ 2023 ರಲ್ಲಿ 2,70,000 ರೂ ಸಾಲ‌ಪಡೆದಿದ್ದರು.
ಈಗಾಗಲೆ 19 ಕಂತುಗಳಲ್ಲಿ 189000 ಸಾಲ‌ ಮರುಪಾವತಿಸಿದ್ದಾರೆ.

ಚಿನ್ನಸ್ವಾಮಿ ಪತ್ನಿ ಸಹ ಇಕ್ವೀಟಾಸ್ ಫೈನಾನ್ಸ್ ನಲ್ಲಿ ಗಂಪು ಸಾಲ ಪಡೆದಿದ್ದರು.ಮನೆ ಸಾಲ‌ಮರುಪಾವತಿ ಕಂತಿನ ಹಣವನ್ನು ಗುಂಪುಸಾಲಕ್ಕೆ ಜಮೆ ಮಾಡಿಕೊಂಡಿದೆ ಎಂದು ಚಿನ್ನಸ್ವಾಮಿ ಆರೋಪಿಸಿದ್ದಾರೆ.

ತಮ್ಮ ಅನುಮತಿ ಪಡೆಯದೆ ಸುಮಾರು 60 ಸಾವಿರಕ್ಕೂ ಹೆಚ್ವು ಹಣ ಗುಂಪು ಸಾಲಕ್ಕೆ ಜಮೆ ಮಾಡಿಕೊಂಡಿದ್ದಾರೆ.ಇದೀಗ ಏಕಾಏಕಿ ಮನೆ ಸಾಲದ ಕಂತು ಕಟ್ಟಿಲ್ಲವೆಂದು ಮನೆ ಜಪ್ತಿ ಮಾಡಿದ್ದಾರೆ ಎಂದು ಅವರು ನೊಂದು ನುಡಿದಿದ್ದಾರೆ.

ಸಾಲ ಮರುಪಾವತಿಗಾಗಿ ಚಿನ್ನಸ್ವಾಮಿ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕಾಲಾವಕಾಶ ಕೋರಿದ್ದರು ಜತೆಗೆ ಮನೆ ಜಪ್ತಿ ತಡೆಯುವಂತೆಯೂ ಮನವಿ ಮಾಡಿದ್ದರು.

ಆದರೆ ಯಾವುದಕ್ಕು ತಲೆಕೆಡೆಸಿಕೊಳ್ಳದ ಫೈನಾನ್ಸ್ ಸಾಲ ಮರುಪಾವತಿ ಮಾಡುವಂತೆ ತಾಕೀತು ಮಾಡಿತ್ತು.ನೆನ್ನೆ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆ ಜಪ್ತಿ ಮಾಡಿ ನೋಟಿಸ್ ಅಂಟಿಸಿ ಹೋಗಿದ್ದಾರೆ.

ಮನೆ ಜಪ್ತಿ ತೆರವು ಗೊಳಿಸುವಂತೆ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಚಿನ್ನಸ್ವಾಮಿ ದೂರು ನೀಡಿದ್ದಾರೆ.