ಮೈಸೂರು: ವೈಯುಕ್ತಿಕ ಉಪಯೋಗಕ್ಕಾಗಿ ವ್ಯಕ್ತಿಯೊಬ್ಬರಿಂದ ಪಡೆದ ಕಾರನ್ನ ಹಿಂದಿರುಗಿಸದ ಮೈ ಟಾರ್ಪಾಲಿನ್ಸ್ ಮಾಲೀಕ ಪ್ರದೀಪ್ ಸಿಂಗ್ ವಿರುದ್ದ ದೇವರಾಜ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಪ್ರದೀಪ್ ಸಿಂಗ್ ವಿರುದ್ಧ ಬೆಂಗಳೂರಿನ ರಾಜಿಯಾ ಖಾನಂ ಎಂಬುವರು ಪ್ರಕರಣ ದಾಖಲಿಸಿದ್ದಾರೆ.
ಫಾರ್ಚುನರ್ ಕಾರನ್ನ ವೈಯುಕ್ತಿಕ ಕಾರಣಕ್ಕೆ ಪಡೆದಿದ್ದ ಪ್ರದೀಪ್ ಸಿಂಗ್ ನಂತರ ಸಂಪರ್ಕಕ್ಕೆ ಸಿಕ್ಕಿಲ್ಲವೆಂದು ಎಫ್.ಐ.ಆರ್.ನಲ್ಲಿ ತಿಳಿಸಲಾಗಿದೆ.
ರಾಜಿಯಾ ಖಾನಂ ಅವರು ಖಾಸಗಿ ಫೈನಾನ್ಸ್ ನಲ್ಲಿ 21 ಲಕ್ಷ ಸಾಲ ಪಡೆದು ಸೆಕೆಂಡ್ ಹ್ಯಾಂಡ್ ಫಾರ್ಚುನರ್ ಕಾರು ಖರೀದಿಸಿದ್ದರು.ಅವರ ಮೈದುನ ಕಾರನ್ನ ಬಳಸುತ್ತಿದ್ದರು.
2024 ನವೆಂಬರ್ ನಲ್ಲಿ ಪ್ರದೀಪ್ ಸಿಂಗ್ ತಮ್ಮ ವೈಯುಕ್ತಿಕ ಬಳಕೆಗೆ ಕಾರು ಪಡೆದಿದ್ದರು.ನಂತರ ಕಾರನ್ನ ಹಿಂದಿರುಗಿಸದೆ ಸಂಪರ್ಕಕ್ಕೆ ಸಿಕ್ಕಿಲ್ಲ.ಕಾರಿನಲ್ಲೇ ಒರಿಜಿನಲ್ ಡಾಕ್ಯುಮೆಂಟ್ಸ್ ಇಟ್ಟಿದ್ದರೆಂದು ಹೇಳಿಕೆ ನೀಡಿರುವ ರಾಜಿಯಾ ಖಾನಂ ಅವರು ಪ್ರದೀಪ್ ಸಿಂಗ್ ವಿರುದ್ದ ವಂಚನೆ ಪ್ರಕರಣ ದಾಖಲಿಸಿದ್ದಾರೆ.